ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಹೆಸರುಗಳಿಸಿಕೊಂಡಿದ್ದ ಕಲ್ಲಮುಂಡ್ಕೂರಿನ ಗಂಗಾಧರ ಶೆಟ್ಟಿ ಅವರು ನಿಧನರಾಗಿದ್ದಾರೆ.
ನಿಡ್ಡೋಡಿಯ ನಿವಾಸಿಯಾಗಿರುವ ಅವರು ಕಲ್ಲಮುಂಡ್ಕೂರಿನಲ್ಲಿ ಗುರು ಎಂಟರ್ಪ್ರೈಸ್ ಸಂಸ್ಥೆಯನ್ನು ಹೊಂದಿದ್ದು ರಾಜಕೀಯವಾಗಿಯೂ ಗಮನಸೆಳೆದಿದ್ದರು.
ರಂಗಕಲಾವಿದರಾಗಿ ಹಲವಾರು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದ ಅವರು ಪ್ರಸ್ತುತ ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾಗಿದ್ದರು.





