ಮೂಡುಬಿದಿರೆ ಸಮೀಪದ ಬನ್ನಡ್ಕ ಬಳಿ ಮತ್ತೊಮ್ಮೆ ರಕ್ತ ಚೆಲ್ಲಿದೆ. ಶೃಂಗೇರಿಯಿಂದ ಮೂಡುಬಿದಿರೆಗೆ ಬರುತ್ತಿದ್ದ ವಿಶಾಲ್ ಬಸ್ಸು ಎದುರಿನಿಂದ ಬರುತ್ತಿದ್ದ ಸ್ಕೂಟರ್ ಹಾಗೂ ಕಾರನ್ನು ತಪ್ಪಿಸಲು ಹೋಗಿ ಬಸ್ಸು ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರಿಕ್ಷಾವೊಂದಕ್ಕೆ ಅಂಬುಲೆನ್ಸ್ ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಮೃತಪಟ್ಟಿದ್ದರು.
ಇದೀಗ ಮತ್ತೊಂದು ಅಪಘಾತ ನಡೆದು ಜೀವಹಾನಿಯಾಗಿಲ್ಲವಾದರೂ ಸಣ್ಣಪುಟ್ಟ ಗಾಯಗಳಾಗಿದೆ.







