ಮಂಗಳವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಇರುವೈಲಿನ ಮನೆಯೊಂದರ ಮೇಲೆ ವಿದ್ಯುತ್ ಕಂಬ ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಇರುವೈಲಿನ ಪರಾರಿಯ ರಮೇಶ್ ಪ್ರಭು ಎಂಬವರ ಮನೆ ಮೇಲೆ ರಾತ್ರಿ ಬೀಸಿದ ಗಾಳಿಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ.
ಅಲಂಗಾರು ಉಳಿಯ ಗ್ರಾಮದಲ್ಲಿ ಅಪ್ಪಿ ಎಂಬವರ ಮನೆಗೆ ಹಾನಿಯಾಗಿದ್ದು ಹುಡುಗಿಯೊಬ್ಬಳಿಗೆ ಸಣ್ಣಪುಟ್ಟ ಗಾಯವಾಗಿದೆ.
ಅಲಂಗಾರು, ಬೆಳುವಾಯಿ ಪರಿಸರದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು ಹಲವೆಡೆ ಕೆಲವು ಮರಗಳು ಧರೆಗುರುಳಿದೆ.
ಪತ್ರಕರ್ತ ಧನಂಜಯ ಮೂಡುಬಿದಿರೆ ಅವರ ಮನೆಮೇಲೂ ತೆಂಗಿನ ಮರ ಬಿದ್ದು ಹಾನಿತಯಾಗಿದೆ.


ರಾತ್ರಿಯಾದಂತೆ ಸುರಿಯುತ್ತಿರುವ ಮಳೆ ಮತ್ತು ಬೀಸುವ ಗಾಳಿಯಿಂದಾಗಿ ರಾತ್ರಿಯಿಡೀ ವಿದ್ಯುತ್ ಸಂಪರ್ಕ ಇರುವುದಿಲ್ಲ. ಅಲ್ಲಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು ಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ.
ಕರೆಂಟ್ ಇಲ್ಲದೆ ಹೆಚ್ಚಿನವರ ಮೊಬೈಲ್ ಚಾರ್ಜ್ ಇಲ್ಲದೆ ಸಂಪರ್ಕಕ್ಕೂ ಕಷ್ಟವಾಗುತ್ತಿದ್ದು ಬೆಳಗ್ಗಿನ ಉಪಹಾರಕ್ಕೆ ಪಕ್ಕದ ಹೊಟೇಲ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.





