ಯುವವಾಹಿನಿ, ನಾಟ್ಯ, ಭರತನಾಟ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಮನಸೆಳೆದಿರುವ ಮೂಡುಬಿದಿರೆಯ ಶಂಕರ್ ಎ.ಕೋಟ್ಯಾನ್ ಅವರ ಪತ್ನಿ ಜೀವಿತಾ ಶಂಕರ್ ಮಾಲಕತ್ವದ ಹೊಸ ಸಂಸ್ಥೆ Jeevi’s Silk & Sage ನಾಳೆ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಆಳ್ವಾಸ್ ರಸ್ತೆಯ ಮಿನೇಜಸ್ ಕಾಂಪ್ಲೆಕ್ಸ್ ನಲ್ಲಿ ಈ ನೂತನ ಸಂಸ್ಥೆ ಶುಭಾರಂಭಗೊಳ್ಳಲಿದ್ದು ಆಳ್ವಾಸ್ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ.
ನಿಶ್ಮಿತಾ ಸಂಸ್ಥೆಯ ಮೀನಾಕ್ಷಿ ನಾರಾಯಣ್, ಡಾ.ಗ್ರೀಷ್ಮಾ ವಿವೇಕ್ ಆಳ್ವ,ಡಾ.ಮಮತಾ ಗುರುಪ್ರಸಾದ್,ನ್ಯಾಯವಾದಿ ಶ್ವೇತಾ ಜೈನ್,ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್,ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ಶೆಟ್ಟಿ,ಕಾಳಿಕಾ ಡಿಜಿಟಲ್ ಪ್ರಿಂಟ್ಸ್ ನ ಮಾಲಕಿ ಶಾಂತಲಾ ಸೀತಾರಾಮ ಆಚಾರ್ಯ ಹಾಗೂ ಮೂಡುಕೊಣಾಜೆ ಬ್ರಹ್ಮತೇಜ ಫಾರ್ಮ್ಸ್ ನ ಶಂಕರ ಕೋಟ್ಯಾನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಜೀವಿತಾ ಶಂಕರ್ ಅವರು ತಿಳಿಸಿದ್ದಾರೆ.





