ಅಚ್ಚರಿಕಟ್ಟೆ ರಸ್ತೆಗೆ ಬಿದ್ದ ವಿದ್ಯುತ್ ತಂತಿ *ಮೂರು ದಿನಗಳಾದರೂ ಡೋಂಟ್ ಕೇರ್ !

Picture of Namma Bedra

Namma Bedra

Bureau Report

ಮೊನ್ನೆ ಬೀಸಿದ ಭಾರೀ ಗಾಳಿಗೆ ಮರ ಬಿದ್ದು, ಅದರ ಪರಿಣಾಮ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದು ಅಪಾಯದಲ್ಲಿದ್ದರೂ ಈ ಪ್ರದೇಶಕ್ಕೆ ಮೆಸ್ಕಾಂ‌ ನವರು ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಪಡುಮಾರ್ನಾಡು ಗ್ರಾಮ ಪಂಚಾಯತ್ ಗೆ ಹೋಗುವ ರಸ್ತೆ ಇದಾಗಿದೆ.ತುಂಬಾ ಮಂದಿ ಮಕ್ಕಳು, ಗ್ರಾಮಸ್ಥರು, ಪಂಚಾಯತ್ ಗೆ ಹೋಗುವವರು ಅಂತ ಈ ರಸ್ತೆಯಲ್ಲಿ ಸಂಚರಿಸುತ್ತಾರೆ.ಈ ಘಟನೆ ನಡೆದು ಮೂರು ದಿನಗಳಾಗಿದೆ. ಸ್ಥಳೀಯ ಮುಖಂಡರು ಹಲವು ಬಾರಿ ಮೆಸ್ಕಾಂ‌ ನವರಿಗೆ ವಿಷಯ ತಿಳಿಸಿದ್ದಾರೆ. ಆದರೆ ಇನ್ನು ಕೂಡಾ ಮೆಸ್ಕಾಂ‌ ನವರು ಈ ಜಾಗಕ್ಕೆ ಹೋಗದೆ ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪವಿದೆ.
ಇಲ್ಲೊಂದು ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಒದಗಿಸುವುದೊಳ್ಳೆಯದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top