ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ರಸ್ತೆಗೆ ಗಾಳಿಯಿಂದ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದು ಅಪಾಯವಿದೆ, ಮೂರು ದಿನಗಳಾದರೂ ಮೆಸ್ಕಾಂ ನವರು ಬರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ನಿನ್ನೆ ‘ ನಮ್ಮ ಬೆದ್ರ’ ದಲ್ಲಿ ವರದಿ ಪ್ರಕಟವಾಗಿತ್ತು.

ಈ ವರದಿಗೆ ಸ್ಪಂದಿಸಿದ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಮತ್ತೆ ಹಿಂದಿನಂತೆ ಮಾಡಿದ್ದಾರೆ.
ಸ್ಪಂದಿಸಿದ ಮೆಸ್ಕಾಂ ಅಧಿಕಾರಿಗಳಿಗೆ,ಸಿಬ್ಬಂದಿಗಳಿಗೆ ಈ ಭಾಗದ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.





