ರೋಟರಿ ಕ್ಲಬ್ ಆಫ್ ಮೂಡುಬಿದಿರೆ ವತಿಯಿಂದ ಶಿರ್ತಾಡಿ ಹೈಸ್ಕೂಲ್ ಗೆ ಮೈಕ್ ಸಟ್ ಕೊಡುಗೆ

Picture of Namma Bedra

Namma Bedra

Bureau Report

ರೋಟರಿ ಕ್ಲಬ್ ಆಫ್ ಮೂಡುಬಿದಿರೆ ವತಿಯಿಂದ ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಗೆ ಸುಮಾರು 70 ಸಾವಿರ ರೂ.ವೆಚ್ಚದ ಮೈಕ್ ಸೆಟ್ಟನ್ನು ನೀಡಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ರೊ.ನಾಗರಾಜ್ ಹೆಗ್ಡೆ ಅವರು ಮುಖ್ಯ ಶಿಕ್ಷಕಿ ಸಾವಿತ್ರಿ ಅವರಿಗೆ ಈ ಕೊಡುಗೆಯನ್ನು ಹಸ್ತಾಂತರಿಸಿದರು.
ಶಾಲಾ ಸಂಚಾಲಕ ಎಸ್.ಡಿ.ಸಂಪತ್ ಸಾಮ್ರಾಜ್ಯ,ರೋಟರಿ ಕ್ಲಬ್ ಕಾರ್ಯದರ್ಶಿ ರೊ.ಪವನ್ ರಾಜ್, ಸಹಾಯಕ ಗವರ್ನರ್ ರೊ.ಉಮೇಶ್ ರಾವ್, ಆಡಳಿತ ಮಂಡಳಿಯ ಕಾರ್ಯದರ್ಶಿ ಟಿ.ಕೆ.ವೆಂಕಟರಾವ್,ಕೋಶಾಧಿಕಾರಿ ಡಾ. ಆಶೀರ್ವಾದ್, ಸದಸ್ಯರಾದ ಕೆ.ಎನ್.ಭಟ್, ಜಯಾನಂದ ಶೆಟ್ಟಿ, ಸುರೇಶ್ ಅಂಚನ್, ಶಿಕ್ಷಕಿಯರಾದ ಮಾಲತಿ, ಶ್ವೇತಾ, ಸುಮಂಗಳಾ, ಸಿಬ್ಬಂದಿಗಳಾದ ವಿನಾಯಕ ಕಾಮತ್, ಮುಹಮ್ಮದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top