ಸಂಪಿಗೆ ಚಿಟ್ಟೆಮಾರ್ ನ ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದೊಂದಿಗೆ ನಿರ್ಮಾಣಗೊಂಡ ನೂತನ ಕಟ್ಟಡ ‘ಪದ್ಮಾವತಿ ಜೈನ ಸಮುದಾಯ ಭವನ’ ದ ಉದ್ಘಾಟನೆ ಜೂ.1 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷ ನಾಗವರ್ಮ ಜೈನ್ ಅವರು ತಿಳಿಸಿದ್ದಾರೆ.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ನೂತನ ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ.

ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಝೆಡ್.ಝಮೀರ್ ಅಹಮದ್ ,ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ಕೆ.ಅಭಯಚಂದ್ರ, ಡಾ.ಎಂ.ಮೋಹನ ಆಳ್ವ, ಚೌಟರ ಅರಮನೆಯ ಕುಲದೀಪ್ ಎಂ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ,ಉದ್ಯಮಿ ಕೆ.ಶ್ರೀಪತಿ ಭಟ್, ಪುತ್ತಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಅಡಿಗಳ್ ಅನಂತಕೃಷ್ಣ ಭಟ್, ಅರಮಲೆಬೆಟ್ಟ ಸುಖೇಶ್ ಕುಮಾರ್ ಜೈನ ಕಡಂಬು,ಎಂ.ಬಾಹುಬಲಿ ಪ್ರಸಾದ್, ಸುಚರಿತ ಶೆಟ್ಟಿ,ಸುಧಾಕರ ತಂತ್ರಿ ಸಂಪಿಗೆ,ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ, ಕಿಶೋರ್ ಕುಮಾರ್ ಚಿಟ್ಟೆಮಾರ್,ಪುಷ್ಪರಾಜ್ ಜೈನ್ ಮಂಗಳೂರು, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿ ಜಿನೇಂದ್ರ ಕೋಟ್ಯಾನ್, ವಕೀಲೆ ಶ್ವೇತಾ ಜೈನ್,ಪುತ್ತಿಗೆ ಪಿ.ಡಿ.ಒ.ಭೀಮಾ ನಾಯ್ಕ್, ಜೈನ್ ಮಿಲನ್ ಅಧ್ಯಕ್ಷ ಮಹೇಂದ್ರ ವರ್ಮ ಜೈನ್ ,ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ನವೀನ್ ಚಂದ್ರ ಹೆಗ್ಡೆ ಹಾಗೂ ಡಾ.ಅನುಷಾ ನಾಗವರ್ಮ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಸುದೇಶ್ ಜೈನ್ ಮಕ್ಕಿಮನೆ ಅವರ ಸಂಯೋಜನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ನಾಗವರ್ಮ ಜೈನ್ ಮತ್ತು ಕಾರ್ಯದರ್ಶಿ ಸುನೀಶ್ ಕುಮಾರ್ ಜೈನ್ ಕಡಂಬು ಅವರು ತಿಳಿಸಿದ್ದಾರೆ.






