‘ಕ್ರಾಂತಿ’ಗಾಗಿ ‘ಶಾಂತಿ’…!ಬೆದ್ರದಲ್ಲಿಂದು ರೈತರ ಬೃಹತ್ ಜಾಥಾ.

Picture of Namma Bedra

Namma Bedra

Bureau Report

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬೆದ್ರದಲ್ಲಿಂದು ರೈತರ ಬೃಹತ್ ಜಾಥಾ ನಡೆಯಲಿದೆ.ಮಧ್ಯಾಹ್ನದವರೆಗೆ ಬೆದ್ರ ಸಂಪೂರ್ಣ ‘ಹಸಿರುಮಯ’ ವಾಗಿ ಕಾಣಲಿದೆ.

ಅಂದಹಾಗೆ, ಈ ಜಾಥಾದ ಹಿಂದಿರುವ ದೊಡ್ಡ ಶಕ್ತಿಯಾಗಿ, ರೈತರಿಗೆ ಸದಾ ಬೆನ್ನೆಲುಬಾಗಿ ನಿಂತವರು ವಕೀಲರೂ, ರೈತರ ಪರವಾದ ಹೋರಾಟಗಾರರೂ ಆಗಿರುವ ಶಾಂತಿಪ್ರಸಾದ್ ಹೆಗ್ಡೆ. ಅವರೇ ಇಂದಿನ ಪ್ರತಿಭಟನಾ ಜಾಥಾದ ಹೀರೋ ಆಗಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮೂಡುಬಿದಿರೆ ಅಥವಾ ಜಿಲ್ಲೆಯಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ ರೈತರನ್ನು ಒಗ್ಗೂಡಿಸಲು ಎರಡೂ ಪ್ರಮುಖ ಪಕ್ಷಗಳಿಗೆ ಅಸಾಧ್ಯ.ಆದರೆ ಶಾಂತಿಪ್ರಸಾದ್ ಫೀಲ್ಡಿಗಿಳಿದರೆಂದರೆ ರೈತರು ದೊಡ್ಡ ಸಂಖ್ಯೆಯಲ್ಲಿ ಅವರನ್ನು ಹಿಂಬಾಲಿಸುತ್ತಾರೆ.ಇದು ಶಾಂತಿಪ್ರಸಾದ್ ಅವರಿಗಿರುವ ತಾಕತ್ತು ಮತ್ತು ರೈತರು ಅವರ ಮೇಲಿಟ್ಟಿರುವ ನಂಬಿಕೆ.
ಹಿಂದೆ ಕೆಲವುಬಾರಿ ರೈತರ ಪ್ರತಿಭಟನಾ ಜಾಥಾ ನಡೆಸಿ ಗಮನಸೆಳೆದಿರುವ ಶಾಂತಿಪ್ರಸಾದ್ ಹೆಗ್ಡೆಯವರು ಅಂದೆಲ್ಲಾ ದೊಡ್ಡ ಸಂಖ್ಯೆಯಲ್ಲಿ ರೈತರನ್ನು ಒಂದುಗೂಡಿಸಿದ್ದರು.ರೈತರಿಗೆ ಅನ್ಯಾಯವಾದಾಗಲೆಲ್ಲಾ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಎದುರಲ್ಲಿ ಎಷ್ಟೇ ಪ್ರಭಾವಿಯಾಗಿದ್ದರೂ ಕ್ಯಾರೇ ಮಾಡದ ಶಾಂತಿಪ್ರಸಾದ್ ಅವರು ರೈತರಿಗೆ ನ್ಯಾಯ ಸಿಗುವವರೆಗೆ ಹಿಂಜರಿಯುವ ಮನುಷ್ಯನೇ ಅಲ್ಲ.
ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಸದಾ ರೈತರ ಪರವಾಗಿಯೇ ಇರುವ ಶಾಂತಿಪ್ರಸಾದ್ ಹೆಗ್ಡೆಯವರಿಗಿಂದು ಉಭಯಜಿಲ್ಲೆಯಲ್ಲಿ ದೊಡ್ಡ ಹೆಸರಿದೆ.ಅವರ ಮೇಲಿನ ವಿಶ್ವಾಸ, ನಂಬಿಕೆಯಿಂದಲೇ ರೈತರು ಪಕ್ಷ ಬೇಧ ಬಿಟ್ಟು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಶಾಂತಿ ಅವರನ್ನು ಬೆಂಬಲಿಸುತ್ತಾರೆ.
ಸಮಾಜದ ಎಲ್ಲಾ ವರ್ಗದ ರೈತರನ್ನು, ಎಲ್ಲಾ ಪಕ್ಷದಲ್ಲಿರುವ ರೈತರನ್ನು ಏಕಕಾಲಕ್ಕೆ ಒಂದುಗೂಡಿಸುವ ಕೆಪ್ಯಾಸಿಟಿ ಇದ್ದರೆ ಅದು ಅವರೊಬ್ಬರಿಗೆ ಮಾತ್ರ ಸಾಧ್ಯ.ಅದಕ್ಕೆ ಇಂದಿನ ಪ್ರತಿಭಟನೆ ಸಾಕ್ಷಿಯಾಗಲಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶ್ಯಾಮಿಲಿ ಎನ್ಕ್ಲೇವ್ ( ಪುರಸಭಾ ಕಚೇರಿ ಬಳಿ) ಕಟ್ಟಡ ಬಳಿಯಿಂದ ತಹಶೀಲ್ದಾರ್ ಕಚೇರಿಯವರೆಗೆ ನಡೆಯಲಿರುವ ಜಾಥಾಕ್ಕೆ ಈಗಲೇ ರೈತರು ಹಸಿರು ಶಾಲಿನೊಂದಿಗೆ ತಯಾರಾಗಿ ಬರುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top