ವಾಲ್ಪಾಡಿ: ಮೆರವಣಿಗೆಯೊಂದಿಗೆ ಶಾಲಾರಂಭ

Picture of Namma Bedra

Namma Bedra

Bureau Report

ಮಕ್ಕಳ ಮೆರವಣಿಗೆ ಮೂಲಕ ವಾಲ್ಪಾಡಿ ಮಾಡದಂಗಡಿ ಶಾಲಾ ಪ್ರಾರಂಭೋತ್ಸವವು ನಡೆಯಿತು.
ಬಳಿಕ ಎಲ್ಲ ಮಕ್ಕಳಿಗೂ ಹೂ ನೀಡಿ ಸ್ವಾಗತಿಸಲಾಯಿತು. ಶಾಲಾ ವಿದ್ಯಾರ್ಥಿಗಳೇ ದೀಪ ಬೆಳಗಿಸಿ ಉದ್ಘಾಟಿಸಿದರು.


ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ ಸುವರ್ಣ ಅವರು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಉಪಾಧ್ಯಕ್ಷೆ ಶೋಭಾ ಶೆಟ್ಟಿ,ಮಸೀದಿ ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ, ಯೂಸುಫ್, ಶಮೀರ್, ಅಶ್ರಫ್, ರೇಣುಕಾ,ಅಮಿತಾ ಲೋಬೋ, ಸುರೇಖಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ರಶ್ಮಿ ಎಂ.ಎಸ್ ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top