‘ಪ್ರಜಾವಾಣಿ’ ಬಳಗವು ಕೊಡಮಾಡುವ ‘ ಪ್ರಜಾವಾಣಿ ಸಿನಿ ಸಮ್ಮಾನ’ ಕ್ಕೆ ಚಿತ್ರ ನಿರ್ದೇಶಕ, ಮೂಡುಬಿದಿರೆ ಸಮೀಪದ ಮೂಡುಕೊಣಾಜೆಯವರಾಗಿರುವ ಕಿಶೋರ್ ಮೂಡುಬಿದಿರೆ ಅವರು ‘ ಅತ್ಯುತ್ತಮ ನಿರ್ದೇಶಕ’ ನಾಗಿ ಆಯ್ಕೆಯಾಗಿದ್ದರು.
ಕಿಶೋರ್ ಅವರು ನಿರ್ದೇಶಿಸಿರುವ ‘ ರಿಪ್ಪನ್ ಸ್ವಾಮಿ’ ಚಿತ್ರದ ನಿರ್ದೇಶನಕ್ಕಾಗಿ ಅವರು ನಾಮನಿರ್ದೇಶನಗೊಂಡಿದ್ದಾರೆ.
ಹಿರಿತೆರೆ, ಕಿರುತೆರೆಯ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಕಿಶೋರ್ ಅವರು 2011 ರಲ್ಲಿ ಕಲಾ ನಿರ್ದೇಶಕ ಚೇತನ್ ಮುಂಡಾಡಿ ಅವರ ತಂಡದಲ್ಲಿ ಸೆಟ್ ಬಾಯ್ ಆಗಿ ಕೆಲಸ ಪ್ರಾರಂಭಿಸಿ ಆ ಬಳಿಕ ಸಹ, ಸಹಾಯಕ ನಿರ್ದೇಶಕರಾದರು.
12 ತುಳು ಸಿನೆಮಾಗಳಲ್ಲಿ ಸಹ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅವರು 2020 ರಲ್ಲಿ ವಿಜಯ ರಾಘವೇಂದ್ರ ಅವರಿಗೆ ‘ ಮಾಲ್ಗುಡಿ ಡೇಸ್ ‘ ಚಿತ್ರ ನಿರ್ದೇಶಿಸಿದ್ದಾರೆ.
‘ಅಪ್ಪೆ ಟೀಚರ್’ ಎಂಬ ತುಳು ಹಾಸ್ಯಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಇವರದ್ದು ‘ರಿಪ್ಪನ್ ಸ್ವಾಮಿ’ ಮೂರನೇ ಸಿನೆಮಾ.
ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ನಟಿಸಿದ್ದು ಅವರಿಗೂ ‘ ಬೆಸ್ಟ್ ಆಕ್ಟರ್’ ಪ್ರಶಸ್ತಿ ಲಭಿಸಿದೆ. ಅಲ್ಲದೆ ಬೆಸ್ಟ್ ಎಡಿಟರ್ ಪ್ರಶಸ್ತಿಯನ್ನು ಶಶಾಂಕ್ ನಾರಾಯಣ್ ಹಾಗೂ ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ಪ್ರಶಸ್ತಿಯನ್ನು ಸಿದ್ಧಾರ್ಥ್ ಬೆಳ್ಮಣ್ಣು ಅವರು ಪಡೆದಿದ್ದಾರೆ.
‘ ಪ್ರಜಾವಾಣಿ’ ಕೊಡಮಾಡುವ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಗೆ ಕಿಶೋರ್ ಮೂಡುಬಿದಿರೆ ಅವರು ಆಯ್ಕೆಯಾಗಿರುವುದು ಮೂಡುಬಿದಿರೆಗೆ ಹೆಮ್ಮೆಯ ವಿಷಯವಾಗಿದೆ.






