ಕಲ್ಲಮುಂಡ್ಕೂರು, ನಿಡ್ಡೋಡಿ ಹಾಗೂ ಕುದ್ರಿಪದವು ವ್ಯಾಪ್ತಿಗಳನ್ನೊಳಗೊಂಡು ನೂತನವಾಗಿ ಅಸ್ತಿತ್ವಕ್ಕೆ ಬಂದ ಕಲ್ಲಮುಂಡ್ಕೂರು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾಗಿ ಪ್ರವೀಣ್ ಜೋಗಿ ಅವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸುಂದರ ಪೂಜಾರಿ ನಿಡ್ಡೋಡಿ, ಉಪಾಧ್ಯಕ್ಷರಾಗಿ ಕಿಶೋರ್ ಸುವರ್ಣ ಕಲ್ಲಮುಂಡ್ಕೂರು, ಕಾರ್ಯದರ್ಶಿಯಾಗಿ ಆಲ್ವಿನ್ ರೆಬೆಲ್ಲೋ ದಡ್ಡು ಹಾಗೂ ಕೋಶಾಧಿಕಾರಿಯಾಗಿ ಆನಂದ ಬಂಗೇರ ಪದವು ಅವರು ಆಯ್ಕೆಯಾಗಿದ್ದಾರೆ.






