ಮಂಗಳವಾರ ಬೆಳಿಗ್ಗೆ ನಿಧನರಾಗಿರುವ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಜನಾಝವು ಇಂದು ಬೆಳಿಗ್ಗೆ ಕಾಶಿಪಟ್ಣದ ದಾರುನ್ನೂರ್ ವಿದ್ಯಾ ಸಂಸ್ಥೆಗೆ ತಲುಪಿದ್ದು ಅವರ ದಫನ ಕಾರ್ಯವು ಇಂದು ಬೆಳಿಗ್ಗೆ 8 ಗಂಟೆಗೆ ದಾರುನ್ನೂರ್ ಮಸೀದಿ ಬಳಿ ನಡೆಯಿತು.
ಜಿಲ್ಲೆಯ ಖ್ಯಾತ ಉಲೆಮಾ, ವಿದ್ವಾಂಸರು, ಮಸೀದಿಗಳ ಧರ್ಮಗುರುಗಳು, ಮಸೀದಿಯ ಪ್ರಮುಖರು, ವಿದ್ಯಾರ್ಥಿಗಳು ಎಂದು ಸಾವಿರಾರು ಜನ ಅಂತಿಮ ದರ್ಶನ ಪಡೆದರು.


ಸಚಿವ ಯು.ಟಿ.ಖಾದರ್, ಕೇರಳ ಶಾಸಕ ಕಲ್ಲಟ್ರ ಮಾಯಿನ್ ಹಾಜಿ, ರಕ್ಷಿತ್ ಶಿವರಾಮ್, ಸತೀಶ್ ಕಾಶಿಪಟ್ಣ, ಪಿ.ಕೆ.ರಾಜು ಪೂಜಾರಿ ,ಶಾಫಿ ಕಾಶಿಪಟ್ಣ,ಸಲಾಮ್ ಮರೋಡಿ ಸಹಿತ ಹಲವಾರು ಪ್ರಮುಖರು ಭಾಗವಹಿಸಿದ್ದರು.






