ವಯೋ ನಿವೃತ್ತಿ, ಪದೋನ್ನತಿ ಹಾಗೂ ವರ್ಗಾವಣೆಗೊಂಡಿರುವ ಅರಣ್ಯ ಇಲಾಖೆ ಮೂಡುಬಿದಿರೆ ಉಪವಿಭಾಗದ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭವು ಇಂದು (ಮಂಗಳವಾರ) ಸಂಜೆ ಪ್ರಕೃತಿ ಶಿಕ್ಷಣ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
ಗಸ್ತು ಅರಣ್ಯಪಾಲಕ ಶಂಕರ ಗೌಡ,ಕಂಪ್ಯೂಟರ್ ನಿರ್ವಾಹಕಿ ಉಷಾ ಶೆಟ್ಟಿ ಹಾಗೂ ಚಂದ್ರಯ್ಯ ಆಚಾರಿ ವಯೋನಿವೃತ್ತಿ ಹೊಂದಿದ್ದಾರೆ.
ಮಂಜುನಾಥ ಗಾಣಿಗ ಅವರು ಮಂಗಳೂರು ವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದು ಪ್ರಭಾಕರ ಕುಲಾಲ್ ಅವರು ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ಪ್ರಥಮ ದರ್ಜೆ ಸಹಾಯಕರಾಗಿದ್ದ ಜಯರಾಮ್ ಪಿ.ಎನ್.ಅವರು ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದು ಕಾರ್ಕಳ ವನ್ಯಜೀವಿ ವಲಯದ ಗಸ್ತು ಅರಣ್ಯಪಾಲಕಿ ಸ್ವರ್ಣ ನಾಯಕ್ ಅವರು ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದು ಇವರೆಲ್ಲರ ಬೀಳ್ಕೊಡುಗೆ ಸಮಾರಂಭವು ಇಂದು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.






