ಮಿಜಾರಿನ ಚೆಕ್ ಪೋಸ್ಟ್ ಬಳಿ ಕಳೆದ ಭಾನುವಾರ ರಾತ್ರಿ ನಡೆದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಪಾದಾಚಾರಿಯೋರ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಢಿಕ್ಕಿ ಹೊಡೆದು ಪರಾರಿಯಾಗಿರುವ ಗೂಡ್ಸ್ ಟೆಂಪೊ ಮತ್ತು ಅದರ ಚಾಲಕನ ಪತ್ತೆ ಇನ್ನೂ ಆಗಿಲ್ಲ.
ಭಾನುವಾರ ರಾತ್ರಿಯೇ ರಾ.ಹೆ.ಯ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಸಿಡಿದೆದ್ದ ಮಿಜಾರು ,ತೋಡಾರ್ ಪರಿಸರದ ಜನರು ಇದೀಗ ಇಂದು ಮತ್ತೊಮ್ಮೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ತನ್ನಷ್ಟಕ್ಕೇ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಿಜಾರು ಶಾಸ್ತಾವು ಬಳಿಯ ತಿಪ್ಲಬೆಟ್ಟು ನಿವಾಸಿ ರವಿ ( 37)ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಳ್ಳುತ್ತಿದ್ದ ಅವರು ಕಿವುಡ ಹಾಗೂ ಮೂಗನಾಗಿದ್ದರು.ಬಡ ಕುಟುಂಬದವರಾಗಿದ್ದ ಅವರು ಈ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಪರಾರಿಯಾದ ಟೆಂಪೊ ಮತ್ತು ಅವೈಜ್ಞಾನಿಕ ಕಾಮಗಾರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಬೆಳಿಗ್ಗೆ ಮತ್ತೆ ಪ್ರತಿಭಟನೆ ನಡೆಯಲಿದೆ. ಹೆದ್ದಾರಿ ಕಾಮಗಾರಿ ಅತ್ಯಂತ ಕಳಪೆ ಮಟ್ಟದ್ದಾಗಿದ್ದು ಜನರಿಗೆ ಸಮಸ್ಯೆಗಳಾಗುತ್ತಿದೆ.ಒಟ್ಟಾರೆಯಾಗಿ ಕಾಮಗಾರಿ ಕುರ್ತೆಲ್ ಕಾಮಗಾರಿಯಾಗಿದೆ ಎಂದು ಜನರು ಆರೋಪಿಸಿದ್ದಾರೆ.






