ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಆಶೀರ್ವಾದ್ ಅವರನ್ನು ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ಜವಾಹರ್ ವಿದ್ಯಾವರ್ಧಕ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಪದಾಧಿಕಾರಿಗಳಾದ ಸತೀಶ್ ವಿ.ಶೆಟ್ಟಿ, ಜಯಾನಂದ ಶೆಟ್ಟಿ, ಟಿ.ಕೆ.ವೆಂಕಟರಾವ್, ಕೌಶಿಕ್ ಕೆ.ಎಸ್, ಕೆ.ನಾರಾಯಣ ಭಟ್,ಸುಧಾಕರ್, ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಮತ್ತಿತರರು ಉಪಸ್ಥಿತರಿದ್ದರು.






