ಇದು ಬಸ್ ನಿಲ್ದಾಣನಾ, ಕಾರು ಪಾರ್ಕಿಂಗಾ… ಸ್ಕೂಟರ್ ಸ್ಟಾಂಡಾ…..? ಒಂಜಿಲಾ ಅರ್ಥಾಪುಜಿ…!

Picture of Namma Bedra

Namma Bedra

Bureau Report

ಬೆದ್ರ ಬಸ್ ನಿಲ್ದಾಣದ ಪಾರ್ಕಿಂಗ್ ಸಮಸ್ಯೆ ಬಹಳ ಪರಾ ಕೇಸ್. ಮೀಟಿಂಗ್ ಮಾಡಿ ಮಾಡಿ ಯಾವ ಪ್ರಯೋಜನವೂ ಆಗಲಿಲ್ಲ ‌.
ಬಸ್ಸು ನಿಲ್ದಾಣದಲ್ಲಿ ಬಸ್ಸುಗಳನ್ನು ಹೊರತುಪಡಿಸಿ ಉಳಿದ ವಾಹನಗಳೇ ಹೆಚ್ಚು ಬಂದು ಪಾರ್ಕಿಂಗ್ ಮಾಡುತ್ತದೆ, ಕೆಲವು ಬೈಕಿನವರು ಪುಲ್ಯಕಾಂಡೆ ನಿಲ್ಲಿಸಿ ಹೋದರೆ ಪೊರ್ತು ಕಂತುನ ಪೊರ್ತಲ್ಲಿ ಬಂದು ಸ್ಟಾರ್ಟ್ ಮಾಡಿ ಹೋಗುತ್ತಾರೆ, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ,ನಮಗೆ ಗ್ರಾಹಕರೂ ಕಡಿಮೆಯಾಗುತ್ತಾರೆ ಎಂದು ಇಲ್ಲಿನ ಅಂಗಡಿ ಮಾಲಕರು ಹಲವುಬಾರಿ ಅರ್ಜಿ ಬರೆಸಿಕೊಂಡು ಪುರಸಭೆಗೆ ಹೋಗಿದ್ದರು.


‘ ನಾವು ತಿಂಗಳಿಗೆ ಕರೆಕ್ಟಾಗಿ ಪುರಸಭೆಗೆ ಬಾಡಿಗೆ ಕಟ್ಟುವುದಿಲ್ಲವಾ? ನಮಗೆ ಆಗುತ್ತಿರುವ ಅನ್ಯಾಯಕ್ಕೆ ಪುರಸಭೆಯವರೇ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ‘ ಎಂದು ಅಂಗಡಿ ಮಾಲಕರು ಹೇಳಿರುವುದರಲ್ಲಿ ಯಾವ ತಪ್ಪೂ ಇಲ್ಲ.
ಪುರಸಭೆಯವರು, ಪೊಲೀಸರು ಸೇರಿ ಕಾಂಪ್ಲೆಕ್ಸಿನ ಮೇಲೆ ಮತ್ತು ಕೆಳಗೆ ಎರಡೂ ಕಡೆ ಮೀಟಿಂಗ್ ಮಾಡಿದ್ದಾರೆ. ಆದರೆ ಇಷ್ಟು ವರ್ಷವಾದರೂ ಇಲ್ಲಿನ ಸಮಸ್ಯೆಯನ್ನು ಪರಿಹರಿಸಲು ಅವರಿಂದ ಸಾಧ್ಯವಾಗಿಲ್ಲ. ಈತೆಲ್ಯ ಸಮಸ್ಯೆಯನ್ನು ಪರಿಹರಿಸಲಾಗದವರಿಂದ ಇನ್ನೇನು ನಿರೀಕ್ಷಿಸಲಿ ?
ಈಗ ಮಳೆಗಾಲ.ಕಂಡಾಬಟೆ ವಾಹನಗಳು ಬಸ್ ಸ್ಟಾಂಡಿಗೆ ಬರುತ್ತದೆ. ಕೆಲವೊಮ್ಮೆ ಕಂಡಕಂಡಲ್ಲಿ ಬೈಕು,ಕಾರುಗಳನ್ನು ನಿಲ್ಲಿಸುವುದರಿಂದ ಬಸ್ಸುಗಳಿಗೆ ಸರಿಯಾಗಿ ನಿಲ್ಲಲು ಜಾಗ ಇರುವುದಿಲ್ಲ.ಹಾಗಾಗಿ ಪೀಂಕನ್ ಒರ್ದ ಮಾಡಿ ನಿಲ್ಲಿಸುವುದರಿಂದ ಜನರಿಗೂ ಗೊಂದಲ.
ಇಂದಿನ ಇಲ್ಲಿನ ಪಾರ್ಕಿಂಗ್ ಗಮನಿಸಿ.ಬುದ್ಧಿವಂತರೂ ಕಂಡಕಂಡಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪುರಸಭೆಯವರನ್ನು ಕ್ಯಾರೇ ಮಾಡುವುದಿಲ್ಲ ಎನ್ನುವ ಸೂಚನೆಯನ್ನು ನೀಡುವಂತಿದೆ.
ಅಂದೊಮ್ಮೆ ಎರಡು ಲೈನ್ ಟೂ ವೀಲರ್ಸ್ ಗೆ ಅಂತ ಮಂಜೊಲು ಮಂಜೊಲು ಪೈಂಟಿನ ಗೆರೆ ಹಾಕಲಾಗಿತ್ತು. ಅದು ಒಂದೇ ದಿನದ ಮಳೆಗೆ ಮಯಕ್ಕವಾಗಿದೆ.
ಪುರಸಭೆಯವರು ಇನ್ನಾದರೂ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸದಿದ್ದರೆ ‘ ನಮ್ಮಿಂದ ಸಾಧ್ಯವಿಲ್ಲ’ ಎನ್ನುವುದನ್ನು ಅವರೇ ಒಪ್ಪಿಕೊಂಡಂತೆ !

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top