ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನೆಗುಡ್ಡೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಜಿಲ್ಲಾ- ಪಂಚಾಯತ್ ರಸ್ತೆಯನ್ನೇ ಕಬಳಿಸಿ ಕಂಪೌಂಡ್ ನಿರ್ಮಾಣ ಮಾಡಿದ್ದು ಇಲ್ಲೀಗ ಸಾರ್ವಜನಿಕ ಸಂಚಾರಕ್ಕೆ ತೀರಾ ಸಮಸ್ಯೆಯುಂಟಾಗಿದೆ ಎಂದು ಸ್ಥಳೀಯ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್ ಗೌಡ ಅವರು ಆರೋಪಿಸಿದ್ದಾರೆ.
ಇಲ್ಲಿ ರಸ್ತೆ ಅಗಲೀಕರಣಕ್ಕೆಂದು ಸರಕಾರದ ಹಣವನ್ನು ದುರುಪಯೋಗವಾಗಿರುವ ಸಂಶಯವಿದೆ ,ಈ ಬಗ್ಗೆ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.


ರಸ್ತೆಯ ಮಧ್ಯೆ ಇದ್ದ ದೊಡ್ಡ ಬಂಡೆಕಲ್ಲುಗಳನ್ನು ಮುಗ್ರೋಡಿ ಕನ್ಸ್ಟ್ರಕ್ಷನ್ಸ್ ನವರು ಸಮತಟ್ಟುಗೊಳಿಸಿದ್ದರು.ಆದರೆ ಈಗ ರಸ್ತೆಯನ್ನೇ ಅಗೆದು ಕಂಪೌಂಡ್ ನಿರ್ಮಾಣ ಮಾಡಿರುವುದರಿಂದ ಈಭಾಗದ ಜನರ ಮತ್ತು ವಾಹನಗಳ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದೆ, ಪಂಚಾಯತ್ ನವರಿಗೆ ಈಬಗ್ಗೆ ಗೊತ್ತಿದ್ದರೂ ಯಾವ ಕ್ರಮವೂ ಕೈಗೊಂಡಿಲ್ಲವೆಂದು ಆರೋಪಿಸಿರುವ ಗಣೇಶ್ ಗೌಡ ಅವರು ರಸ್ತೆ ಕಬಳಿಸಿ ಸಾರ್ವಜನಿಕರಿಗೆ ಅನ್ಯಾಯ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.







