ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ.ಧ್ವಜಾರೋಹಣ ನೆರವೇರಿಸಿದರು.
ಮಸೀದಿಯ ಖತೀಬರಾದ ಹಮೀದ್ ದಾರಿಮಿ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ತ್ಯಾಗ ಬಲಿದಾನಗಳ ಕುರಿತು ಮಾತನಾಡಿ ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಸೌಹಾರ್ದತೆಯಿಂದ ಬದುಕಬೇಕೆಂದು ಹೇಳಿದರು.

ಕಾರ್ಯದರ್ಶಿ ಝಕರಿಯಾ, ಹಸನಬ್ಬ ( ಬಾವುಞ್ಞಾಕ ) ಶಿರ್ತಾಡಿ, ಜನ ಉಬೈದುಲ್ಲಾ, ಜಮಾಲುದ್ದೀನ್,ಅಶ್ರಫ್ ವಾಲ್ಪಾಡಿ, ಸೂಫಿ ಕುಞ್ಞಿ,ರಮೀಝ್, ಅಶ್ರಫ್ ಕಜೆ,ಯೂಸುಫ್, ಮುಅಝ್ಝಿನ್ ಹನೀಫ್ ಮುಸ್ಲಿಯಾರ್, ಸಲೀಮ್,ಕಲಂದರ್,ಆರಿಫ್ ಇಲ್ಲಿ,ಅಲ್ತಾಫ್, ಬಿ.ಕೆ.ಇಕ್ಬಾಲ್,ಅಝೀಝ್, ಹಕೀಮ್, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







































