ತೋಡಾರ್ ಮ್ಯಾಕ್ ವಾರಿಯರ್ಸ್ ತಂಡಕ್ಕೆ ಇಂಡಿಪೆಂಡೆನ್ಸ್ ಟ್ರೋಫಿ

Picture of Namma Bedra

Namma Bedra

Bureau Report

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ತೋಡಾರಿನಲ್ಲಿ ನಡೆದ ಸೀನಿಯರ್ಸ್ ವಿಭಾಗದ ‘ ಇಂಡಿಪೆಂಡೆನ್ಸ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟದಲ್ಲಿ ತೋಡಾರಿನ ಮ್ಯಾಕ್ ವಾರಿಯರ್ಸ್ ತಂಡವು ಪ್ರಥಮ ಹಾಗೂ ಸಫರ್ ಇಲೆವೆನ್ ತೋಡಾರ್ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಬೆಸ್ಟ್ ಬೌಲರ್ ಆಗಿ ಹಫೀಝ್ ತೋಡಾರ್, ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ರಝಾಕ್ ತೋಡಾರ್, ಸರಣಿಶ್ರೇಷ್ಠ ಪ್ರಶಸ್ತಿಯನ್ನು ಆಚಿ ತೋಡಾರ್ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಕೀಮ್ ಮಲ್ಲೂರ್ ಅವರು ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ರಝಾಕ್ ತೋಡಾರ್, ಇಸ್ಮಾಯಿಲ್ ತೋಡಾರ್, ಮಯ್ಯದ್ದಿ, ಝುಬೈರ್ ಇಂಡಿಯನ್ ಹಾಗೂ ರಿಝ್ವಾನ್ ತೋಡಾರ್ ಬಹುಮಾನ ವಿತರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top