ಮೂಡುಬಿದಿರೆಯಲ್ಲಿ ನಾಳೆ ರಾಜ್ಯಮಟ್ಟದ ಸ್ಕ್ವಾಯ್ ಚಾಂಪಿಯನ್ ಶಿಪ್

Picture of Namma Bedra

Namma Bedra

Bureau Report

ಸ್ಕ್ವಾಯ್ ಅಸೋಸಿಯೇಷನ್ ಆಫ್ ಕರ್ಣಾಟಕ ಇದರ ದ.ಕ.ಜಿಲ್ಲಾ ಸ್ಕ್ವಾಯ್ ಅಸೋಸಿಯೇಷನ್ ವತಿಯಿಂದ 19 ನೇ ರಾಜ್ಯಮಟ್ಟದ ಸ್ಕ್ವಾಯ್ ಚಾಂಪಿಯನ್ ಶಿಪ್ ನಾಳೆ ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.ರಾಜ್ಯದ ಸುಮಾರು 400 ರಷ್ಟು ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು ಎಲ್ಲರಿಗೂ ಉಚಿತ ಊಟ ಹಾಗೂ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ, ಮೂಡುಬಿದಿರೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಈ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಸ್ಕ್ವಾಯ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಸರ್ಫ್ರಾಝ್ ಅಬ್ದುಲ್ ಖಾದ್ರಿ ಹಾಗೂ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top