ಹೆಲ್ಮೆಟ್ ಇಲ್ಲದೆ ಬಸ್ಸು ನಿಲ್ದಾಣಕ್ಕೆ ಬಂದ ದ್ವಿಚಕ್ರ ವಾಹನ ಸವಾರರ ವಿರುದ್ಧ, ಕರ್ಕಶ ಹಾರ್ನ್ ಹಾಕುವ ಬಸ್ಸುಗಳ ವಿರುದ್ಧ ಹಾಗೂ ಒನ್ ವೇಯಲ್ಲಿ ಬರುವ ವಾಹನಗಳ ವಿರುದ್ಧ ಮೂಡುಬಿದಿರೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೇಸ್ ಹಾಕಿದ್ದಾರೆ.

ಪೊಲೀಸರು ಹೆಲ್ಮೆಟ್ ಇಲ್ಲದವರನ್ನು, ಒನ್ ವೇಯಲ್ಲಿ ಬರುತ್ತಿದ್ದವರನ್ನು’ಉಂತಾಲೆ…ಉಂತಾಲೆ’ ಅಂತ ಕೈಅಡ್ಡ ಹಿಡಿದು ನಿಲ್ಲಿಸುತ್ತಿದ್ದರು.
ಅದ್ಯಾರೋ ಒಬ್ಬ ನೋ ಎಂಟ್ರಿಯಲ್ಲಿ ಬರುತ್ತಿದ್ದ, ನಿಲ್ಲಿಸಲು ಸೂಚಿಸಿದರು, ನಿಲ್ಲಿಸಿದಂತೆ ಮಾಡಿದ. ಆದರೆ ಇನ್ನೊಬ್ಬನಿಗೆ ಕೈ ಅಡ್ಡ ಹಿಡಿಯುವಷ್ಟರಲ್ಲಿ ಆತ ಎಸ್ಕೇಪ್. ಯಾವ ಸ್ಪೀಡಿನಿಂದ ಬಂದಿದ್ದನೋ ಅದೇ ಸ್ಪೀಡ್ ನಲ್ಲಿ ಹೋದ. ಹೋದದ್ದು ಕೂಡಾ ನೋ ಎಂಟ್ರಿಯಲ್ಲೇ. ( ಸಮಾಜ ಮಂದಿರ ಬಳಿ ಮೇಲೆ ಬಸ್ಟಾಂಡಿಗೆ ಬರುವ ರಸ್ತೆಯಲ್ಲಿ)
ಮತ್ತೊಬ್ಬ ರಿಕ್ಷಾ ಚಾಲಕ ಕೂಡಾ ಹಾಗೇ ಮಾಡಿದ್ದಾನೆ. ಇವರಿಬ್ಬರೂ ಎಲ್ಲಿ ಹೋದರೂ ಅವರನ್ನು ಹಿಡಿದು ಸೈಡಿಗೆ ನಿಲ್ಲಿಸಲೇಬೇಕು.
ಎಎಸ್ಐ ಗಿರೀಶ್, ಹೆಡ್ ಕಾನ್ಸ್ಟೆಬಲ್ ಸಂದೀಪ್ ಅವರು ಹೆಲ್ಮೆಟ್ ಇಲ್ಲದವರ ವಿರುದ್ಧ, ಕರ್ಕಶ ಹಾರ್ನ್ ವಿರುದ್ಧ, ಒನ್ ವೇ ಸವಾರರು,ನೋ ಎಂಟ್ರಿಯಲ್ಲಿ ಎಂಟ್ರಿಯಾದವರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ.







































