2019 ರಲ್ಲಿ ದಾಖಲಾಗಿದ್ದ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಮೂಡುಬಿದಿರೆ ನ್ಯಾಯಾಲಯವು ಆರೋಪಿಗೆ ಚೆಕ್ ಮೊತ್ತದ ಜೊತೆಗೆ ದಂಡ,ಜೈಲುವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ.
ಕೆ.ಎನ್.ಆರಿಗ ಎಂಬವರು ಸೌಮ್ಯ ಎಂಬವರಿಗೆ ನೀಡಿದ್ದ ರೂ.24 ಲಕ್ಷಕ್ಕೆ ಮೂರು ಪ್ರತ್ಯೇಕ ಚೆಕ್ ಪಡೆದುಕೊಂಡಿದ್ದರು.ಆ ಮೂರೂ ಚೆಕ್ ಕೂಡಾ ಬೌನ್ಸ್ ಆಗಿದ್ದರಿಂದ ಆರಿಗ ಅವರು ಸೌಮ್ಯ ವಿರುದ್ಧ ಮೂಡುಬಿದಿರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಸುದೀರ್ಘ ವಿಚಾರಣೆಯ ಬಳಿಕ ಮೂಡುಬಿದಿರೆ ನ್ಯಾಯಾಲಯವು ಆರೋಪಿ ಸೌಮ್ಯಳನ್ನು ತಪ್ಪತಸ್ಥೆ ಎಂದು ಸಾಬೀತು ಪಡಿಸಿ ಆರೋಪಿಗೆ ರೂ.24 ಲಕ್ಷ ಚೆಕ್ ಮೊತ್ತದ ಜೊತೆಗೆ ದಂಡ ಹಾಗೂ ಜೈಲುವಾಸವನ್ನು ಘೋಷಿಸಿದೆ.
ಫಿರ್ಯಾದಿದಾರ ಪರವಾಗಿ ಮೂಡುಬಿದಿರೆಯ ಹಿರಿಯ ವಕೀಲರಾದ ನಾಗೇಶ್ ಶೆಟ್ಟಿ ಡಿ.ಹಾಗೂ ಕಿರಿಯ ವಕೀಲರಾದ ಅಶ್ವಿನಿ ಡಿಸೋಜ ಅವರು ವಾದ ಮಂಡಿಸಿದ್ದರು.







































