ಇದು ಶಿರ್ತಾಡಿ ಸಮೀಪ ರಸ್ತೆ ಪಕ್ಕದಲ್ಲೇ ಇರುವ ಮರವೊಂದರ ಗೆಲ್ಲು.ರಸ್ತೆಗೇ ಬೀಳುವ ಸ್ಥಿತಿಯಲ್ಲಿದೆ.ಇದರ ಎಲ್ಯ ಮೆಗ್ಯೆ ಇತ್ತೀಚೆಗೆ ರಸ್ತೆಗೆ ಬಿದ್ದಿತ್ತು.ಸ್ಕೂಟರ್ ಸವಾರನೊಬ್ಬ ಜಸ್ಟ್ ಮಿಸ್ ಆಗಿ ಪಾರಾಗಿದ್ದಾನೆ.
ಜೋರಾದ ಗಾಳಿ ಮಳೆ ಬಂದರೆ ಈ ಮಲ್ಲಣ್ಣನಂತಿರುವ ಗೆಲ್ಲು ಕೂಡಾ ರಸ್ತೆಗೆ ಬೀಳುವುದು ಗ್ಯಾರಂಟಿ. ಒಂದು ವೇಳೆ ವಾಹನ,ಜನಸಂಚಾರದ ವೇಳೆ ಬಿದ್ದರೆ ಅಪಾಯ ಖಂಡಿತ.
ಅರಣ್ಯ ಇಲಾಖೆ ಇದನ್ನು ಕಡಿಯಬೇಕಾದರೆ ಮೆಸ್ಕಾಂ ನವರ ಸಹಕಾರ ಬೇಕು.ಎರಡೂ ಇಲಾಖೆಯವರು ಸೇರಿಕೊಂಡು ಈ ಗೆಲ್ಲನ್ನು ಕಡಿಸಿ ಜನರಿಗೆ ಉಪಕಾರವಾಗುವಂತಹ ಕೆಲಸ ಮಾಡಬೇಕಿದೆ.
ಗೆಲ್ಲಿನ ವಿಳಾಸ:
ಶಿರ್ತಾಡಿಯಿಂದ ಹೊಸ್ಮಾರು ಕಡೆಗೆ ಹೋಗುವಾಗ ಭುವನಜ್ಯೋತಿ ಶಾಲಾ ವಠಾರದ ಸ್ವಲ್ಪ ಮುಂದೆ.ಅಂಚಿಡ್ದ್ ಇಂಚಿ ಬರುವಾಗ ದಿ.ಆಲಿಬ್ಯಾರಿಯವರ ಮನೆಯ ಮುಂದೆ!








































