ಮೂಡುಬಿದಿರೆಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ ಪಂದ್ಯಾವಳಿಯಲ್ಲಿ ಬೆಂಗಳೂರು ಜಿಲ್ಲೆ ಪ್ರಥಮ, ದ.ಕ.ಜಿಲ್ಲೆ ದ್ವಿತೀಯ ಹಾಗೂ ದಾವಣಗೆರೆ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ.
ಸಮಾರೋಪ ಸಮಾರಂಭದಲ್ಲಿ ದ.ಕ.ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ ಎಂ, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮುಹಮ್ಮದ್ ನದೀಮ್,ರಾಜ್ಯ ಸ್ಕ್ವೇಯ್ ಸಂಸ್ಥೆಯ ಅಧ್ಯಕ್ಷ ಗಿರೀಶ್,ಕಾರ್ಯದರ್ಶಿ ಮುಹಮ್ಮದ್ ಆಲಿ, ದ.ಕ.ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ರಾಹುಲ್ ಟಿ.ಜಿ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ,ಜಿಲ್ಲಾ ಸ್ಕ್ವೇಯ್ ಸಂಸ್ಥೆಯ ಅಧ್ಯಕ್ಷ ಸರ್ಫ್ರಾಝ್,ಕಾರ್ಯದರ್ಶಿ ರಹಿಮಾನ್, ಸ್ವಾಮಿ ಪ್ರಸಾದ್ ಮತ್ತಿತರರು ಬಹುಮಾನ ವಿತರಿಸಿದರು.








































