ಕಡಲಕೆರೆಯಲ್ಲಿ 23 ವರ್ಷಗಳಿಂದ ದೋಣಿ ವಿಹಾರವನ್ನು ನಿರ್ವಹಿಸಿಕೊಂಡು ಬಂದಿರುವ ಡಾ. ಎಂ.ಎಸ್ ನಝೀರ್ ಪುತ್ತೂರುಗೆ ಸನ್ಮಾನ

Picture of Namma Bedra

Namma Bedra

Bureau Report

ಮೂಡುಬಿದಿರೆ:ಒಂಟಿಕಟ್ಟೆಯ ಕಡಲಕೆರೆಯಲ್ಲಿ ಕಳೆದ 23 ವರ್ಷಗಳಿಂದ ದೋಣಿ ವಿಹಾರವನ್ನು ಸಮರ್ಪಕವಾಗಿ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿಕೊಂಡು ಬಂದಿರುವ ಪರಿಸರ ಪ್ರೇಮಿ ಡಾ.ಎಂ.ಎಸ್ ನಝೀರ್ ಪುತ್ತೂರು ಅವರನ್ನು ಶನಿವಾರ ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಸನ್ಮಾನಿಸಿದರು.
ನಂತರ ಮಾತನಾಡಿದ ಶಾಸಕರು ನಝೀರ್ ಅವರು ಕಡಲಕೆರೆಯಲ್ಲಿ ಹಲವು ವರ್ಷಗಳಿಂದ ದೋಣಿ ವಿಹಾರವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಫಲಾಪೇಕ್ಷೆಗಿಂತಲು ಹೆಚ್ಚಾಗಿ ಇದನ್ನು ಹವ್ಯಾಸವನ್ನಾಗಿಸಿಕೊಂಡು ಬಂದಿದ್ದಾರೆ. ಜಲಸಂರಕ್ಷಣೆಯಲ್ಲಿ ವಿಶೇಷ ಸೇವೆ ನೀಡುತ್ತಾ ಬಂದಿದ್ದು ಕಡಲಕೆರೆಗೆ ಸಾರ್ವಜನಿಕರ ಆಕರ್ಷಣೆಗೆ ಇವರ ಕೊಡುಗೆಯು ಇದೆ ಎಂದರು.
ಮಂಗಳೂರು ಡಿ.ಎಫ್.ಒ ಶ್ರೀಧರ್,ಎಸಿಎಫ್ ಆಕಾಶ್, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಇಂದು, ರೋಟರಿ ಕ್ಕಬ್ ಅಧ್ಯಕ್ಷ ಡಾ.ಆಶೀರ್ವಾದ್, ಕಾರ್ಯದರ್ಶಿ ಪ್ರಜ್ವಲ್, ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ.ಕೆ ಥೋಮಸ್, ನ್ಯಾಯವಾದಿ ಕೆ.ಆರ್
. ಪಂಡಿತ್, ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ ಮತ್ತಿತರರು ಇದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top