ಕ್ಯಾಥೋಲಿಕ್ ಕ್ರೈಸ್ತರ ‘ತೆನೆಹಬ್ಬ (ಮೊಂತಿ ಫೆಸ್ತ್) ನ್ನು ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚಿನಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಪವಿತ್ರ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಸಂಪರ್ಕಾಧಿಕಾರಿ (PRO) ವಂದನೀಯ ರೂಪೇಶ್ ಮಾಡ್ತಾ ರವರು ನೆರವೇರಿಸಿದರು. ಅವರು ತಮ್ಮ ಪ್ರವಚನದಲ್ಲಿ ಮೇರಿ ಮಾತೆಯು ಯೇಸುವಿನ ತಾಯಿಯಾಗಿ ಕೌಟುಂಬಿಕ ಆರೈಕೆ ಮತ್ತು ಆಸರೆಯ ಬಗ್ಗೆ ತಿಳಿ ಹೇಳುತ್ತಾ ಮೇರಿ ಮಾತೆಯ ಆಶೀರ್ವಾದಗಳನ್ನು ನೀಡಿದರು.



ಈ ಬಲಿಪೂಜೆಯಲ್ಲಿ ಮೌಂಟ್ ಕಾರ್ಮೆಲ್ ಚರ್ಚಿನ ಧರ್ಮಗುರುಗಳಾದ ವಂದನೀಯ ಸಿಲ್ವೆಸ್ಟರ್ ವಿನ್ಸೆಂಟ್ ಹಾಗೂ ವಂದನೀಯ ಸ್ಪ್ಯಾನಿ ಫೆರ್ನಾಂಡಿಸ್ ರವರು ಉಪಸ್ಥಿತರಿದ್ದರು. ಈ ದಿವಸವನ್ನು ಹೆಣ್ಣುಮಕ್ಕಳ ದಿನಾಚರಣೆಯಾಗಿ ಆಚರಿಸಲಾಯಿತು. ಬಳಿಕ ಭಕ್ತಾದಿಗಳ ವಾಹನಗಳನ್ನು ಆಶೀರ್ವಚನ ಮಾಡಲಾಯಿತು.








































