ಕಾನೂನು ಮಾತೆರೆಗ್ಲಾ ಒಂದೇ. ಮೊನ್ನೆ ಮೊನ್ನೆ ಎಸಿಪಿ ಶ್ರೀಕಾಂತ್ ಅವರು ಬೆದ್ರಕ್ಕೆ ಬಂದು ಪಾರ್ಕಿಂಗ್ ಸಮಸ್ಯೆ, ನೋ ಎಂಟ್ರಿ,ಹೆಲ್ಮೆಟ್ ಹೀಗೆ ಕೆಲವೊಂದು ವಿಷಯದಲ್ಲಿ ಸ್ಟ್ರಿಕ್ ಆಕ್ಷನ್ ತೆಗೆದುಕೊಳ್ಳಲು ಸೂಚಿಸಿ ಹೋದಂದಿನಿಂದ ಪೊಲೀಸರು ಕೂಡಾ ಎಲರ್ಟ್ ಆಗಿದ್ದಾರೆ.
ಬೆದ್ರದಲ್ಲಿ ಪಾರ್ಕಿಂಗ್ ನದ್ದೇ ಪ್ರಾಬ್ಲೆಮ್.ಕಂಡಕಂಡಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಹೋಗುವುದು, ನೋ ಎಂಟ್ರಿಯಲ್ಲಿ ಪೊಗ್ಗಿಸುವುದು,ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವುದು, ತ್ರಿಬ್ಬಲ್ ರೈಡ್ ಹೋಗುವುದು..ಇದನ್ನೆಲ್ಲಾ ತಡೆಯುವ ಪ್ರಯತ್ನವನ್ನು ಮೂಡುಬಿದಿರೆ ಪೊಲೀಸರು ಮಾಡುತ್ತಿದ್ದಾರೆ.ಗಾಡಿ ನಿಲ್ಲಿಸಿ ಫೈನ್ ಹಾಕುತ್ತಾರೆ. ಕಂಡಕಂಡಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಲಾಕ್ ಹಾಕಿ ಹೋಗುತ್ತಾರೆ.
ಈದಿನ ಹೀಗೆ ಲಾಕ್ ಮಾಡಲಾದ ವಾಹನಗಳ ಪೈಕಿ ಪೊಲೀಸ್ ಒಬ್ಬರ ಕಾರೂ ಇದೆ.ಬಸ್ ಸ್ಟಾಂಡಿಗೆ ಹೋಗುವ ಜಾಗದಲ್ಲಿ ಅವರು ತನ್ನ ವಾಹನವನ್ನು ಪಾರ್ಕಿಂಗ್ ಮಾಡಿ ಹೋಗಿದ್ದರು.ಅದು ಪೊಲೀಸ್ ಅಧಿಕಾರಿಯ ವಾಹನವೆಂದು ಲಾಕ್ ಹಾಕಲು ಬಂದ ಪೊಲೀಸರಿಗೆ ಗೊತ್ತಿಲ್ಲ.ಅವರು ಲಾಕ್ ಹಾಕಿ ಹೋಗಿದ್ದಾರೆ.
ಒಳ್ಳೆದಾಯ್ತು ಬಿಡಿ, ಕಾನೂನು ಎಲ್ಲರಿಗೂ ಒಂದೇ ಅಲ್ವಾ ಅಂತ ಜನರಾಡಿಕೊಳ್ಳುತ್ತಿದ್ದಾರೆ.








































