ಮೂಡುಬಿದಿರೆಯ ಹಿಂದಿನ ತಹಶಿಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

Picture of Namma Bedra

Namma Bedra

Bureau Report

ಮೂಡುಬಿದಿರೆಯಲ್ಲಿ ಈ ಹಿಂದೆ ತಹಶಿಲ್ದಾರ್ ಆಗಿದ್ದ ಸಚ್ಚಿದಾನಂದ ಕುಚನೂರು ಅವರು ಧಾರವಾಡದಲ್ಲಿ 50 ಲಕ್ಷ ರೂ.ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಮೂಡುಬಿದಿರೆಯಲ್ಲಿ ಈ ಹಿಂದೆ ತಹಶಿಲ್ದಾರ್ ಆಗಿದ್ದ ಕುಚನೂರು ಅವರು ಧಾರವಾಡಕ್ಕೆ ವರ್ಗಾವಣೆಗೊಂಡಿದ್ದರು.
ತಾಲೂಕಿನ ಯೆರಗೊಪ್ಪ ಗ್ರಾಮದ 33 ಎಕರೆ ಜಾಗದ ಪೈಕಿ 13 ಎಕರೆ ಬಿ.ಕರಾಬ್ ಇತ್ತು.ಇದನ್ನು ಸರಿಪಡಿಸಲು 50 ಲಕ್ಷ ರೂ.ಹಾಗೂ ಎರಡು ಎಕರೆ ಭೂಮಿಯನ್ನು ಕೊಡಬೇಕೆಂದು ಕುಚನೂರು ಅವರು ಬೇಡಿಕೆಯಿಟ್ಟಿದ್ದರು.ಹಣ ಹಿಡ್ಕೊಂಡು ಧಾರವಾಡದ ಕರ್ನಾಟಕ ಕಾಲೇಜು ಆವರಣಕ್ಕೆ ಬರಲು ಹೇಳಿದ್ದರು.
ದೂರುದಾರ ಲೋಕಾಯುಕ್ತ ಪೊಲೀಸರೊಂದಿಗೆ ಹಣದೊಂದಿಗೆ ಬಂದಿದ್ದರು.ಹಣ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಲಂಚಾಸುರನನ್ನು ಬಂಧಿಸಿದ್ದಾರೆ.
ಧಾರವಾಡದಲ್ಲಿ ಅತಿದೊಡ್ಡ ಮಟ್ಟದ ಲಂಚ ಪ್ರಕರಣ ಇದಾಗಿದ್ದು ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಡಿಎಸ್ಪಿ ರವೀಂದ್ರ ಕುರುಬಗಟ್ಟಿ,ಇನ್ಸ್ಪೆಕ್ಟರ್ ಪ್ರಸಾದ್,ಕರುಣೇಶ ಗೌಡ,ಪ್ರಸಾದ ಪಾನೇಕಾರ ದಾಳಿ ನಡೆಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top