ಸುಂದರ ರೈ ಮಂದಾರ, ಸಪ್ನಾ ಕೋಟ್ಯಾನ್ ಅವರಿಗೆ ಸನ್ಮಾನ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಅಮ್ಮ ತಂಡ ಕುಡ್ಲದ ‘ಚಿ.ಸೌ.ಸುಮಂಗಲಾ’ ನಾಟಕ ಪ್ರದರ್ಶನ ಸಂದರ್ಭದಲ್ಲಿ ಕಳೆದ ಮೂರು ದಶಕಗಳಿಂದ ನಾಟಕರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ‘ರಂಗ್ ದ ರಾಜೆ’ ಬಿರುದು ಪಡೆದಿರುವ ಖ್ಯಾತ ಹಾಸ್ಯ ನಟ ಸುಂದರ ರೈ ಮಂದಾರ ಹಾಗೂ ಕಲಾಸೇವೆಯಲ್ಲಿ ಹತ್ತು ವರ್ಷ ಪೂರೈಸಿರುವ ಮೂಡುಬಿದಿರೆಯ ಪ್ರತಿಭೆ ಸಪ್ನಾ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ, ಪುರಸಭಾ ನಿ.ಪೂ.ಉಪಾಧ್ಯಕ್ಷ ನಾಗರಾಜ್ ಪೂಜಾರಿ, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೇಶ್‌ ಶೆಟ್ಟಿ ಪಡುಮಾರ್ನಾಡು, ಮೂಡಾ ಸದಸ್ಯರಾದ ಸತೀಶ್ ಭಂಡಾರಿ ಕರಿಂಜೆ,ಶೇಖರ್ ಬೊಳ್ಳಿ,ಪುರಸಭಾ ನಿ.ಪೂ.ಸದಸ್ಯ ಸುರೇಶ್ ಕೋಟ್ಯಾನ್, ಮಣಿ ಕೋಟೆಬಾಗಿಲು, ಸತೀಶ್ ಅಮೀನ್ ಕಲ್ಲಮುಂಡ್ಕೂರು, ರಾಜೇಶ್ ಕೋಟೆಗಾರ್,ಮಹಾವೀರ್ ಜೈನ್ ಅಳಿಯೂರು,ಪ್ರೇಮನಾಥ ಮಾರ್ಲ, ರಂಗನಟ ದಿಲೀಪ್ ಕುಮಾರ್ ಶೆಟ್ಟಿ, ಅಲ್ತಾಫ್, ಹಫೀಝ್ ತೋಡಾರ್, ವಿಶಾಲ್ ತೋಡಾರ್ ಹಾಗೂ ಅಶ್ರಫ್ ವಾಲ್ಪಾಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top