ನಾಟಕ ರಚನೆಗಾರ ಗಣೇಶ್ ಬಿ.ಅಳಿಯೂರು ಅವರ ಸಂಚಾಲಕತ್ವದ ವಿದ್ಯಾಗಣಪತಿ ಕಲಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಪ್ರಯುಕ್ತ ‘ ಪಟ್ಟದ ಕತ್ತಿ’ ಎಂಬ ಯಕ್ಷಗಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಇಂದು ಸಂಜೆ ಅಳಿಯೂರಿನಲ್ಲಿ ನಡೆಯಲಿದೆ.
ಸಂಜೆ 6-30 ಕ್ಕೆ ಶ್ರೀ ಕಟಿಲೇಶ್ವರಿ ಕನ್ಸ್ಟ್ರಕ್ಷನ್ಸ್ ಮಾಲಕ ನಾಗೇಶ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಖ್ಯಾತ ವಕೀಲರಾದ ಮಯೂರ ಕೀರ್ತಿ ಅವರು ಉದ್ಘಾಟಿಸಲಿದ್ದಾರೆ.
ತಂಡದ ಪ್ರೋತ್ಸಾಹಕ, ಅಳಿಯೂರಿನಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ ಚಾವಡಿಮನೆ ಜಗನ್ನಾಥ ಶೆಟ್ಟಿ ಅವರಿಗೆ ‘ಸಮಾಜಸೇವಾರತ್ನ’ ಪ್ರಶಸ್ತಿ, ಮೂಡುಬಿದಿರೆ ತಾಲೂಕು ಶಾಮಿಯಾನ ಸಮಿತಿ ಅಧ್ಯಕ್ಷರಾದ ರಮಾನಾಥ ಸಾಲ್ಯಾನ್ ಅವರಿಗೆ ಗೌರವ ಅಭಿನಂದನೆ, ನಾಟಕ ತಂಡದ ಗೌರವ ಸಂಚಾಲಕರಾದ ಹೇಮಾವತಿ ಕೆ.ಕೆ.ಪೂಜಾರಿ ಅವರಿಗೆ ಗೌರವ ಸನ್ಮಾನ, ಕ್ರಿಯೇಟಿವ್ ಕಾಲೇಜ್, ಬ್ರೈಟ್ ಕಾಲೇಜ್ ಅಡ್ವೆಂಚರ್ ಕಾಲೇಜುಗಳ ಯಶಸ್ವಿ ಗುತ್ತಿಗೆದಾರ ಇರ್ಫಾನ್ ಯು.ಕೆ,ಯುವ ಉದ್ಯಮಿ ಸತೀಶ್ ಪೂಜಾರಿ ಗುಂಡೂರಿ ಅವರಿಗೆ ‘ ಉದ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವಿದ್ಯಾಗಣಪತಿ ಕಲಾ ಪ್ರತಿಷ್ಠಾನದ ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗಣೇಶ್ ಬಿ.ಅಳಿಯೂರು ರಚನೆಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ ಅವರ ನಿರ್ದೇಶನದಲ್ಲಿ ಸರಪಾಡಿ,ಬಂಗಾಡಿ,ಚಂದ್ರಶೇಖರ ಧರ್ಮಸ್ಥಳ, ಅಶ್ವಥ್ ಕೈಕಂಬ ಇನ್ನಿತರ ದಿಗ್ಗಜ ಕಲಾವಿದರ ಅಭಿನಯದಲ್ಲಿ ‘ ಪಟ್ಟದ ಕತ್ತಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.












