ಈ ಋತುವಿನ ಮೊದಲ ಕಂಬಳ ಪಣಪಿಲದ ‘ಜಯ-ವಿಜಯ’ ಜೋಡುಕರೆ ಕಂಬಳವು ಹೊನಲು ಬೆಳಕಿನಲ್ಲಿ ನ.7 ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರಾದ ಯುವರಾಜ್ ಜೈನ್ ನಂದೊಟ್ಟು ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಅಶ್ವಥ್ ಪಣಪಿಲ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಥ್ ಪಣಪಿಲ ಅವರು ‘ ಹದಿನೇಳನೇ ವರ್ಷದ ಪಣಪಿಲ ಕಂಬಳವು ಈ ಋತುವಿನ ಮೊದಲ ಕಂಬಳವಾಗಿದೆ, ಈಗಾಗಲೇ ಕಂಬಳಕ್ಕೆ ಬೇಕಾದ ಸಿದ್ದತೆಗಳು ಭರ್ಜರಿಯಾಗಿ ನಡೆಯುತ್ತಿದೆ,ಜಿಲ್ಲಾ ಕಂಬಳ ಸಮಿತಿಯ ನಿರ್ದೇಶನದಂತೆ ಸಮಯಕ್ಕೆ ಸರಿಯಾಗಿ ಕಂಬಳ ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಬೇರೆ ಬೇರೆ ವಿಭಾಗದ ಸ್ಪರ್ಧೆಗಳು ನಡೆಯಲಿದೆ ‘ ಎಂದರು.
ಜಿಲ್ಲಾ ಕಂಬಳ ಸಮಿತಿಯ ನಿರ್ದೇಶನ,ಕಂಬಳ ಕೋಣಗಳ ಯಜಮಾನರು, ಊರವರು, ಕಂಬಳಾಭಿಮಾನಿಗಳ ಸಹಕಾರದಲ್ಲಿ ಕಂಬಳವು ಯಶಸ್ವಿಯಾಗಿ ನಡೆಯಲಿದೆ, ಸುಮಾರು 150 ಕ್ಕಿಂತಲೂ ಹೆಚ್ಚು ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದವರು ಹೇಳಿದರು.
ಕಂಬಳ ಸಮಿತಿಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ, ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರು,ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಕಂಬಳವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಸನಿಲ್, ಪ್ರಧಾನ ತೀರ್ಪುಗಾರರಾದ ಗುಣಪಾಲ ಕಡಂಬ,ಮುರಳೀಕೃಷ್ಣ ಭಟ್,ವಂ.ಪೀಟರ್ ಅರಾನ್ಹ,ರಂಜಿತ್ ಪೂಜಾರಿ, ಪ್ರವೀಣ್ ಭಟ್ ಕಾನಂಗಿ, ಅಶೋಕ್ ಶೆಟ್ಟಿ ಬೇಲೊಟ್ಟು,ಪ್ರಮೋದ್ ಕುಮಾರ್ ಆರಿಗ, ಶ್ರೀಮತಿ ಹೇಮಾ ಮತ್ತು ಕೆ.ಕೆ.ಪೂಜಾರಿ, ನಾಗರಾಜ್ ಪೂಜಾರಿ ಒಂಟಿಕಟ್ಟೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರಾತ್ರಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ,ಸಚಿವರಾದ ಯು.ಟಿ.ಖಾದರ್,ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕಂಬಳ ಅಸೋಸಿಯೇಷನ್ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಶಾಸಕರಾದ ವಿ.ಸುನಿಲ್ ಕುಮಾರ್, ಹರೀಶ್ ಪೂಂಜಾ, ಅಶೋಕ್ ರೈ, ಮಾಜಿ ಸಚಿವ ಕೆ.ಅಭಯಚಂದ್ರ ಸಹಿತ ಹಲವಾರು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಹೇಳಿದರು.
ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು,ಪ್ರಮುಖರಾದ ಭಾಸ್ಕರ ಕೋಟ್ಯಾನ್, ಸಂದೀಪ್ ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್,ರಶ್ಮಿತ್ ಶೆಟ್ಟಿ, ಗಿರೀಶ್ ಆಳ್ವ, ಅರುಣ್ ಶೆಟ್ಟಿ, ಪಿ.ಆರ್.ಶೆಟ್ಟಿ, ದೇವರಾಜ್ ಹೆಗ್ಡೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












