ನಮ್ಮ ರಾಘುಗೆ ಮೊದಲ ಸನ್ಮಾನ ಮತ್ತು ಮೊದಲ ಭಾಷಣ

Picture of Namma Bedra

Namma Bedra

Bureau Report

ರಾಘವೇಂದ್ರ ಶೆಟ್ಟಿ. ರಾಘು ಎಂದರೆ ಬೆದ್ರದಲ್ಲಿ ಫೇಮಸ್ ಹೆಸರು. ಸಭೆ,ಸಮಾರಂಭಗಳ ಸಂದರ್ಭದಲ್ಲಿ ಏನಾದರೂ ನೇರಪ್ರಸಾರಕ್ಕೆ, ವೀಡಿಯೋ ಚಿತ್ರೀಕರಣಕ್ಕೆ ಸಂಘಟಕರು ಮೊದಲು ಹುಡುಕುವುದೇ ಈ ರಾಘುನನ್ನು.
ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆ, ಮಂಗಳೂರಿನಲ್ಲಿ ನಮ್ಮ ಕುಡ್ಲ ಚಾನೆಲ್ ನ ಲೈವ್ ಕಾರ್ಯಕ್ರಮದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಾ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ರಾಘು ಕೆಲ ವರ್ಷಗಳಿಂದ ಮೂಡುಬಿದಿರೆಯಲ್ಲಿ ಎಂ.ಡಿ.ಬಿ.ಲೈವ್ ಎಂಬ ಸ್ವಂತ ಸಂಸ್ಥೆಯನ್ನು ತೆರೆದು ಕೆಲ ಯುವಕರಿಗೆ ಉದ್ಯೋಗ ನೀಡಿದವರು.
ಸದಾ ಹಸನ್ಮುಖಿಯಾಗಿರುವ ಇವರ ಸೇವೆಯನ್ನು ಅರಿತ ಮೂಡುಬಿದಿರೆಯ ಸಮಾಜ ಮಂದಿರ ಮತ್ತು ಯುವವಾಹಿನಿ ಸಂಘಟನೆ ಇತ್ತೀಚೆಗೆ ಅವರನ್ನು ಸಮಾಜಮಂದಿರದಲ್ಲಿ ನಡೆದ ಗೂಡುದೀಪ ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿದೆ.


ಇದು ಅವರ ಮೊದಲ ಸನ್ಮಾನ ಮತ್ತು ಸನ್ಮಾನಕ್ಕೆ ಉತ್ತರಿಸಿದ ಅವರ ಭಾಷಣ ಮೊದಲ ಭಾಷಣ.
ಮೊದಲ ಭಾಷಣವಾದರೂ ರಾಘು ಚೆನ್ನಾಗಿ ಮಾತನಾಡಿದ್ದಾರೆ. ಅವರಲ್ಲಿ ಅಪಾರವಾದ ಅನುಭವವಿದೆ, ಮಾತುಗಾರಿಕೆಯ ಕಲೆಯೂ ಇದೆ‌.ಯಾವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದರೂ ಆ ಸಂದರ್ಭ, ಯಾವ ಕಾರ್ಯಕ್ರಮವೆಂದರಿತು ಚೆನ್ನಾಗಿ ಮಾತನಾಡಬಲ್ಲರು.
ಮೊದಲ ಸನ್ಮಾನ ಮಾಡುವ ಮೂಲಕ, ಮೊದಲ ಭಾಷಣ ಮಾಡಿಸುವ ಮೂಲಕ ರಾಘು ಅವರ ಸೇವೆ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಿದ ಸಮಾಜಮಂದಿರ,ಯುವವಾಹಿನಿಗೆ ಹಾಗೂ ಮೊದಲ ಸನ್ಮಾನ ಸ್ವೀಕರಿಸಿದ ಸನ್ಮಿತ್ರ ರಾಘು ಅವರಿಗೆ ಅಭಿನಂದನೆಗಳು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top