ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಶಿಪಟ್ಣ ಶಾಲೆಯ ಶಿಕ್ಷಕಿ ವಸುಧಾ ಪಿ.ಅವರಿಗೆ 'ಜಿಲ್ಲಾ ಮಟ್ಟದ ಮಕ್ಕಳ ಸ್ನೇಹಿ ಶಿಕ್ಷಕ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾಶಿಪಟ್ಣ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಸುಧಾ ಪಿ. ಅವರು ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಟಿ.ಕೆ.ವೆಂಕಟರಾವ್ ಅವರ ಪತ್ನಿ.



