ಬಿಸಿಯೂಟ ಅಡುಗೆ ಸಿಬ್ಬಂದಿಗಳು ಕಳೆದ ಕೆಲ ದಿನಗಳಿಂದ ಮುಷ್ಕರ ಮಾಡುತ್ತಿರುವುದರಿಂದ ಬಿಸಿಯೂಟದ ಮಂಡೆಬಿಸಿ ಶಿಕ್ಷಕರಿಗೆ.
ಮಕ್ಕಳಿಗೆ ಊಟ ಕೊಡಲೇಬೇಕು.ಎಸ್ಡಿಎಂಸಿ ಸದಸ್ಯರು ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಾರೆ.ಹಾಗಾಗಿ ತಾವೇ ಅಡುಗೆ ತಯಾರಿಸಿ ಕೊಡಬೇಕಾದ ಅನಿವಾರ್ಯತೆ ಶಿಕ್ಷಕರದ್ದು.
ವಾಲ್ಪಾಡಿಯ ಮಾಡದಂಗಡಿ ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿ ಎಂ.ಎಸ್.ಹಾಗೂ ಸಹಶಿಕ್ಷಕಿ ಶೈಲಜಾ ಅವರು ಮಕ್ಕಳಿಗೆ ಶುಚಿರುಚಿಯಾದ ಅಡುಗೆ ತಯಾರಿಸಿ ಕೊಡುವ ಮೂಲಕ ಪಾಠಕ್ಕೂ ಸೈ- ಊಟಕ್ಕೂ ಸೈ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.



