ಮೂಡುಬಿದಿರೆಗೆ ಸರಕಾರಿ ಬಸ್ ಬಂದದ್ದೇ ಬಂದದ್ದು.ಭರ್ಜರಿ ‘ ರಾಜಕೀಯ ಸ್ವಾಗತ’ ಸಿಕ್ಕಿದೆ. ಗುರುವಾರ ಬೆಳಿಗ್ಗೆ ಭಾರತೀಯ ರೈತಸೇನೆಯವರು ಮೂಡುಬಿದಿರೆಯಲ್ಲಿ ಹೂಗುಚ್ಚ ನೀಡಿ ಸ್ವಾಗತಿಸಿ ಆ ಬಳಿಕ ಪ್ರೆಸ್ ಮೀಟ್ ಮಾಡಿ ‘ ನಮ್ಮ ಹೋರಾಟದ ಫಲ’ ಎಂದಿದ್ದರು.

ಇವತ್ತು ಬೆಳಿಗ್ಗೆ ಬಿಜೆಪಿಯವರು ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ವಿದ್ಯಾಗಿರಿಯಲ್ಲಿ ಬಸ್ಸನ್ನು ಸ್ವಾಗತಿಸಿ ‘ಕೋಟ್ಯಾನ್ ಅವರು ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ ನಂತರವೇ ಬಸ್ ಬರಲು ಕಾರಣ’ ಎಂಬಂತೆ ಸಂಭ್ರಮಿಸಿದರು.
ಇದಾದ ಬಳಿಕ ಮೂಡುಬಿದಿರೆಯ ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಬಸ್ಸನ್ನು ಸ್ವಾಗತಿಸಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ,ಸಾರಿಗೆ ಸಚಿವರಿಗೆ,ಶ್ರಮಿಸಿದ ಅರುಣ್ ಕುಮಾರ್ ಶೆಟ್ಟಿ ಅವರಿಗೆ ‘ ಜೈ’ ಎಂದರು.
ಅಂತೂ ಬಸ್ ಗೆ ಮಾತ್ರ ಭರ್ಜರಿ ಸ್ವಾಗತ ಸಿಕ್ಕಿದೆ.ಜನರಲ್ಲಿ ಮಾತ್ರ ಗೊಂದಲ- ಮೂಡುಬಿದಿರೆಗೆ ಬಸ್ ತಂದವರು ಯಾರು ??
ಕೆಲವರು ನಿನ್ನೆ ರಾತ್ರಿಯೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ, ಆ ಉತ್ತರ ‘ ಡ್ರೈವರ್’ !