Latest News

ಈ 14 ರ ಬಾಲಕ ಆಸ್ಪತ್ರೆಯಲ್ಲಿ ಮಲಗಿದ್ದಾನೆ-ನಿಮ್ಮೆಲ್ಲರ ಸಹಾಯ ಹಸ್ತದ ನಿರೀಕ್ಷೆಯಲ್ಲಿ!

Picture of Namma Bedra

Namma Bedra

Bureau Report

ಹೆಸರು ಸೃಜನ್. ಸೃಜನಶೀಲ ಬದುಕಿನ ಕನಸು ಕಟ್ಟಿಕೊಂಡಿದ್ದ ಈ 14 ರ ಬಾಲಕ ಮಂಗಳೂರಿನ ಎ.ಜೆ.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಹೇಳಿಕೊಳ್ಳಲಾಗದ ನೋವಿನಿಂದ ಮಲಗಿಕೊಂಡಿದ್ದಾನೆ. ಪ್ರೌಢಾವಸ್ಥೆಗೆ ಕಾಲಿಟ್ಟು ಬದುಕಿನ ಸುಂದರ ಕನಸುಗಳನ್ನು ಕಾಣಬೇಕಾದ ಈ ಹರೆಯದಲ್ಲೇ ಈ ಬಾಲಕನನ್ನು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿದೆ.


ಮೂಡುಬಿದಿರೆ ಸಮೀಪದ ಬಡಕುಟುಂಬವಿದು.ಮನೆ ಯಜಮಾನ ಸುರೇಶ್ ಕುಕ್ಯಾನ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕಳೆದ ನಾಲ್ಕು ವರ್ಷಗಳಿಂದ ಬಳಲುತ್ತಿದ್ದಾರೆ.ತಾಯಿ ಸುಮಿತ್ರಾ ನರ ದೌರ್ಬಲ್ಯಕ್ಕೆ ತುತ್ತಾಗಿ ಕಳೆದ ಹದಿನೈದು ವರ್ಷಗಳಿಂದ ಹಾಸಿಗೆಯಿಂದೇಳುತ್ತಿಲ್ಲ.ಸೃಜನ್ ಗೆ ಅಣ್ಣನೊಬ್ಬನಿದ್ದು ಸೃಜನ್ ಮೂಡುಬಿದಿರೆಯ ಹೈಸ್ಕೂಲ್ ನಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿ.
ವಿದ್ಯಾಭ್ಯಾಸದ ಸಮಯದಲ್ಲೇ ಕಿಡ್ನಿ ವೈಫಲ್ಯ, ಲಿವರ್ ಸಮಸ್ಯೆಗೊಳಗಾಗಿ ಈತನೂ ಆಸ್ಪತ್ರೆಯಲ್ಲಿ ಮಲಗಿದ್ದು ಅಸಹಾಯಕ ಸ್ಥಿತಿಯಲ್ಲಿ ಸಹೃದಯರ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾನೆ.
ಅಸಹಾಯಕ ಸ್ಥಿತಿಯಲ್ಲಿರುವ ಈ ಬಡಕುಟುಂಬದ ಸೃಜನ್ ನ ಬದುಕು ಸೃಜನಶೀಲವಾಗಬೇಕಾದರೆ ನಿಮ್ಮೆಲ್ಲರ ಸಹಾಯ ಖಂಡಿತಾ ಬೇಕಾಗಿದೆ.
ಈತನ ಚಿಕಿತ್ಸೆಗೆ 20 ಲಕ್ಷ ರೂ.ಬೇಕೆಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಸಹೃದಯಿ ದಾನಿಗಳು, ಸಂಘ ಸಂಸ್ಥೆಗಳು ಈ ಬಾಲಕನ ನೆರವಿಗೆ ಮನಸ್ಸು ಮಾಡಲೇಬೇಕಿದೆ.
ಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಕಳುಹಿಸಬಹುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು