ಈಗಾಗಲೇ ಮಂಗಳೂರು-ಮೂಡುಬಿದಿರೆ-ಕಾರ್ಕಳ ರಸ್ತೆಯಲ್ಲಿ ಸರಕಾರಿ ಬಸ್ ಸೇವೆ ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಮಂಗಳೂರು-ಮೂಡುಬಿದಿರೆ- ನಾರಾವಿ ರಸ್ತೆಗೂ ಸರಕಾರಿ ಬಸ್ ಸೇವೆ ಪ್ರಾರಂಭಿಸಬೇಕೆಂದು ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಮತ್ತೊಂದು ಬೇಡಿಕೆ ಇಟ್ಟಿದ್ದಾರೆ.


ಮಂಗಳೂರಿನಲ್ಲಿ ನಡೆದ ಪಂಚಗ್ಯಾರಂಟಿ ಯೋಜನಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರುಣ್ ಅವರು ಕೆಲವೊಂದು ಬೇಡಿಕೆಗಳನ್ನಿಟ್ಟಿದ್ದಾರೆ.
ಮೂಡುಬಿದಿರೆ ರಾಜೀವ್ ಗಾಂಧಿ ಸಂಕೀರ್ಣವನ್ನು ಸಂಪೂರ್ಣ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮಾಡಬೇಕು,ಮೂಡುಬಿದಿರೆಯ ರಿಂಗ್ ರೋಡ್ ರಸ್ತೆಯಲ್ಲಿ ಕೆಎಸ್ಸಾರ್ಟಿಸಿ ಗೆ ಮೀಸಲಿಟ್ಟ ಏಳೂವರೆ ಎಕರೆ ಪ್ರದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ಅವರು ಮಂಗಳೂರು ಸ್ಟೇಟ್ ಬ್ಯಾಂಕ್ ವರೆಗೂ ಕೆಎಸ್ಸಾರ್ಟಿಸಿ ಬಸ್ ಹೋಗುವಂತಾಗಬೇಕು ಮತ್ತು ಪ್ರತಿ ನಿಲ್ದಾಣದಲ್ಲೂ ಬಸ್ ವೇಳಾ ಪಟ್ಟಿಯನ್ನು ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.