ಕಾರ್ಕಳ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಹಾಗೂ ಇತರ ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭವು ಇಂದು ಬೆಳಿಗ್ಗೆ 10-30ಕ್ಕೆ ಕಾರ್ಕಳ ತಾಲೂಕು ಪಂಚಾಯತ್ ಕಚೇರಿ ಕಟ್ಟಡದಲ್ಲಿ ನಡೆಯಲಿದೆ.
ಕಚೇರಿ ಉದ್ಘಾಟನೆ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬೋಧ ರಾವ್ ಅವರು ತಿಳಿಸಿದ್ದಾರೆ.
