Latest News

ದಸ್ಕತ್‌ನಲ್ಲಿ ಸುದ್ದಿಯಾದ ಯುವ ಶೆಟ್ಟಿ. ತುಳು, ಕನ್ನಡಕ್ಕೆ ಸಿಕ್ಕಿದ್ದಾರೊಬ್ಬ ಹೊಸ ಸಮರ್ಥ ವಿಲನ್ ಪಾತ್ರಧಾರಿ

Picture of Namma Bedra

Namma Bedra

Bureau Report

ಮಂಗಳೂರು; ಅನೀಶ್ ಪೂಜಾರಿ ನಿರ್ದೇಶನದಲ್ಲಿ ರಾಘವೇಂದ್ರ ಕುಡ್ವ ಅವರು ನಿರ್ಮಾಣ ಮಾಡಿರುವ “ದಸ್ಕತ್” ತುಳು ಸಿನಿಮಾ ಈಗ ನಿಧಾನವಾಗಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣಗಳು ಹಲವಾರಿವೆ. ತುಳುನಾಡಿನ ಗ್ರಾಮ್ಯ ಪರಿಸರದ ಜನಜೀವನವನ್ನು ಕಟ್ಟಿಕೊಡುವ ಈ ಸಿನಿಮಾದಲ್ಲಿ ಮೋಸಗಾರ ಅಧಿಕಾರಿಯೊಬ್ಬನ ವಿರುದ್ಧ ಮುಗ್ಧ ಜನರು ಹೇಗೆ ಸಿಡಿದೆದ್ದು ಜಯ ಗಿಟ್ಟಿಸಿಕೊಳ್ಳುತ್ತಾರೆ ಎಂಬುದನ್ನು ನೈಜವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿರುವುದು ಒಂದು ಪ್ರಮುಖ ಅಂಶ.
ಅದರಲ್ಲೂ ಈ ಸಿನಿಮಾದ ಖಳನಾಯಕ, ಭ್ರಷ್ಟ ಅಧಿಕಾರಿಯ ಪಾತ್ರದಲ್ಲಿ ಮಿಂಚಿರುವ ಯುವ ಶೆಟ್ಟಿ ಅವರ ನಟನೆ ಭೇಷ್ ಎನಿಸುವಂತಿದೆ. ಕ್ರೌರ್ಯ, ಕೋಪ, ಮೋಸವನ್ನು ಸಮರ್ಥವಾಗಿ ತನ್ನ ಅಭಿನಯದಲ್ಲಿ ತೋರಿಸಿರುವ ಅವರು ಅದಕ್ಕೆ ತಕ್ಕಂತೆ ದೇಹದಾರ್ಢ್ಯತೆಯನ್ನು ಹೊಂದಿರುವುದು ಪಾತ್ರಕ್ಕೆ ಹೊಸ ಘನತೆಯನ್ನು ತಂದುಕೊಟ್ಟಿದೆ.
ಯುವ ಶೆಟ್ಟಿ ಸಿನಿಮಾ ರಂಗದಲ್ಲಿ ಹೆಚ್ಚು ಪರಿಚಿತ ಹೆಸರೇನೂ ಅಲ್ಲ. ಆದರೆ ಈ ಸಿನಿಮಾದ ಬಳಿಕ ಅವರ ಹೆಸರು ಎಲ್ಲರ ಬಾಯಲ್ಲೂ ನಲಿದಾಡುವಂತಾಗಿದೆ. ದಸ್ಕತ್‌ನ ವಿಲನ್ ಮಾಡಿದ ನಟ ಯಾರು ಎಂದು ಕೆಲವರು ಕೇಳುವಂತಾಗಿದೆ. ಅವರ ನಟನೆಗೆ ಎಲ್ಲ ಕಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಅವರಿಗೆ ಚಿತ್ರರಂಗದಲ್ಲಿ ಭಾರೀ ಉತ್ತಮ ಭವಿಷ್ಯ ಇರುವುದರ ಸಂಕೇತವಾಗಿದೆ.
ಭ್ರಷ್ಟ ಪಂಚಾಯತ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು ತನ್ನ ಪ್ರತಿಯೊಂದು ನಡೆಯಲ್ಲೂ ಕ್ರೌರ್ಯ, ಮೋಸವನ್ನು ಪ್ರತಿಬಿಂಬಿಸುವಲ್ಲಿ ಸಫಲರಾಗಿದ್ದಾರೆ. ಸ್ವಭಾವತಃ ಸಭ್ಯರಾಗಿರುವ ಯುವ ಶೆಟ್ಟಿ ತೋಡಾರ್ ಅವರು ವಿಲನ್ ಪಾತ್ರವನ್ನು ಇಷ್ಟೊಂದು ಚೊಕ್ಕವಾಗಿ ಮಾಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರ ನಟನೆಯ ಬಗ್ಗೆ ಗೊತ್ತಿಲ್ಲದವರ ಪ್ರಶ್ನೆ. ಆದರೆ ಅವರ ಪ್ರತಿಭೆಯ ಬಗ್ಗೆ ತಿಳಿದಿರುವವರು ಹೇಳುವುದೇ ಬೇರೆ – ಯುವ ಶೆಟ್ಟಿಯ ಪ್ರತಿಭೆ ಇದಕ್ಕಿಂತಲೂ ಆಳದಲ್ಲಿ ಬೇರೂರಿದೆ. ಅದು ಹೊರ ಬರಲು ಇನ್ನಷ್ಟು ಅವಕಾಶಗಳು ಬೇಕಾಗಿವೆ ಎಂದು.
ಖಂಡಿತ, ಯುವ ಶೆಟ್ಟಿಯವರ ಪ್ರತಿಭೆಯ ಇನ್ನಷ್ಟು ವೇದಿಕೆ ಸಿದ್ಧವಾಗುವುದು ಖಚಿತ. ಅವರಿಗೆ ದಸ್ಕತ್ ಸಿನಿಮಾದ ಬಳಿಕೆ ಸಾಕಷ್ಟು ಅವಕಾಶಗಳು ಬೇರೆ ಬೇರೆ ಭಾಷೆಯ ನಿರ್ದೇಶಕರಿಂದ ಬರಲಾರಂಭಿಸಿದೆ.
ಭೇಷ್ – ಇನ್ನಷು ಎತ್ತರಕ್ಕೆ ಬೆಳೆಯಿರಿ. ಇದು ಯುವ ಶೆಟ್ಟಿಯವರ ಅಭಿಮಾನಿಗಳ ಹಾರೈಕೆ.

ಯುವ ಶೆಟ್ಟಿ ಅಭಿನಯಿದ ನಾಟಕ ತಂಡಗಳು
ಕುರಾಲ್ ಕಲಾವಿದರು ಬೆದ್ರ, ಪಿಂಗಾರ ಕಲಾವಿದರು ಬೆದ್ರ, ಉತ್ಸಾಹಿ ಕಲಾವಿದರು ಶಿರ್ವ, ತುಳುವೆರೆ ಉಡಲ್ ಜೋಡುಕಲ್ಲು, ತುಳುವೆರೆ ತುಡರ್ ಸುರತ್ಕಲ್, ಧರಿತ್ರಿ ಕಲಾವಿದರು ಕುಡ್ಲ, ⁠ಜನನಿ ಕಲಾವಿದರು ಕಾರ್ಕಳ, ಕಲಾಶ್ರಿ ಬೆದ್ರ, ನಮ್ಮ ಕಲಾವಿದರು ಬೆದ್ರ, ನಿಸರ್ಗ ಕಲಾವಿದರು ಬೆದ್ರ,

ನಟಿಸಿರುವ ನಾಟಕಗಳು: 40ರಿಂದ 45 ನಾಟಕಗಳಲ್ಲಿ ಅಭಿನಯಿಸಿದ್ದಾರೆ. 1,500 ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ನಟನೆ: ಆಟಿಡೊಂಜಿ ದಿನ, ಅಭೇದ್ಯಂ, ಅನಿಮಾ, ರಿಧಂ ಬಿರ್ದುದ ಕಂಬುಲ, ವೃಷ್ಠಿ. ಹಾಗೂ ನೆತ್ತರಕೆರೆ.

ಇಡೀ ಸಿನಿಮಾದಲ್ಲಿ ಆವರಿಸಿಕೊಂಡಿರುವ “ಯುವ ಹವಾ
ದಸ್ಕತ್ ಸಿನಿಮಾದಲ್ಲಿ ಯುವ ಶೆಟ್ಟಿಯವರ ಪಾತ್ರ ಪ್ರಮುಖವಾದುದು ಹಾಗೂ ಈ ಪಾತ್ರದ ಮೂಲಕ ಯುವ ಶೆಟ್ಟಿ ಇಡೀ ಸಿನಿಮಾವನ್ನು ಆರಂಭದಿಂದ ಕೊನೆಯತನಕ ಆವರಿಸಿಕೊಂಡಿದ್ದಾರೆ. ಇದರಿಂದಾಗಿಯೇ ಸಿನಿಮಾದ ಯಶಸ್ಸಿನಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಬಹುದು. ಸಿನಿಮಾವು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುವುದರಲ್ಲೂ ಈ ಪಾತ್ರದ ಕೊಡುಗೆ ಪ್ರಮುಖವಾದುದು.
ಪರಭಾಷೆಗಳಿಂದಲೂ ಅವಕಾಶ
ಯುವ ಶೆಟ್ಟಿಗೆ ಈಗ ಪರಭಾಷೆಯ ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿವೆ. ಸಮರ್ಥ ವಿಲನ್ ಪಾತ್ರಧಾರಿಗಳ ಕೊರತೆ ಇರುವ ಬೇರೆ ಬೇರೆ ಭಾಷೆಯ ಸಿನಿಮಾ ರಂಗದ ಪ್ರಮುಖರು ಈಗ ಯುವ ಶೆಟ್ಟಿ ಮೇಲೆ ದೃಷ್ಟಿ ಹಾಕಿದ್ದಾರೆ. ಅದೆಲ್ಲವೂ ಯುವ ಶೆಟ್ಟಿಗೆ ಅವಕಾಶಗಳ ರೂಪದಲ್ಲಿ ಭವಿಷ್ಯದ ಭಾಗ್ಯದ ಬಾಗಿಲನ್ನು ತೆರೆಯುವುದು ಖಚಿತ.

ದಸ್ಕತ್ ಹಳ್ಳಿಸೊಗಡಿನ ಸಿನಿಮಾ
ದಸ್ಕತ್ ಹಳ್ಳಿ ಸೊಗಡಿನ ಸಿನಿಮಾ. ತೋಡಾರ್ ಯುವ ಶೆಟ್ಟಿಯ ಜೊತೆಗೆ ದೀಪಕ್ ರೈ ಪಾಣಾಜೆ ಹಾಗೂ ಮಿಕ್ಕಿ ಉಳಿದ ಎಲ್ಲಾ ಕಲಾವಿದರು ಕೂಡಾ ಉತ್ತಮವಾಗಿ ನಟಿದ್ದಾರೆ. ಎಲ್ಲರೂ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈ ವರ್ಷ ತೆರೆಕಂಡ ಸಿನಿಮಾಗಳಲ್ಲಿ ದಸ್ಕತ್ ಉತ್ತಮ ಸಿನಿಮಾ. ಮನೆಮಂದಿ, ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸ ಬಹುದಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು