ಮೂಡುಬಿದಿರೆ ಸಮೀಪದ ಸಂಪಿಗೆಯ ವಿಶಾಲ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗಿರುವ’ ಸಂಪಿಗೆ ರೆಸಾರ್ಟ್’ನ್ನು ಬುಧವಾರ ಬೆಳಿಗ್ಗೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಅವರು ಉದ್ಘಾಟಿಸಿ ಶುಭಹಾರೈಸಿದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್, ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ,ಚೌಟರ ಅರಮನೆಯ ಕುಲದೀಪ್ ಎಂ, ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್,ನಾರಾಯಣ ಪಿ.ಎಂ,ತಿಮ್ಮಯ್ಯ ಶೆಟ್ಟಿ,ನಂದಕುಮಾರ್ ಕುಡ್ವ,ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ,ಪುರುಷೋತ್ತಮ ಶೆಟ್ಟಿ,ರವೀಂದ್ರ ಶೆಟ್ಟಿ, ಗಜಾನನ ಪೂಂಜ ಮತ್ತಿತರರು ಭಾಗವಹಿಸಿ ನೂತನ ರೆಸಾರ್ಟ್ ಗೆ ಶುಭ ಹಾರೈಸಿದರು.
ರೆಸಾರ್ಟ್ ನ ಸ್ಥಾಪಕರಾದ ಪ್ರವೀಣ್ ಶೆಟ್ಟಿ ಮತ್ತವರ ಸಹೋದರ ಡಾ.ಸುಧಾಕರ ಶೆಟ್ಟಿ ಅವರು ಭಾಗವಹಿಸಿದವರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.
ತೋಡಾರ್ ದಿವಾಕರ ಶೆಟ್ಟಿ,ಪುರುಷೋತ್ತಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ವಿಜಯಕುಮಾರ್ ಕೋಟೆಬಾಗಿಲು, ಅನಿಲ್,ದಿಲೀಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
