ಶಿಕ್ಷಣ, ಧಾರ್ಮಿಕ, ರಾಜಕೀಯ ….ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಹೆಸರು ಪಡೆದಿರುವ ಬೆದ್ರಕ್ಕೆ ಬುಧವಾರ ಉದ್ಘಾಟನೆಗೊಂಡ ‘ಸಂಪಿಗೆ ರೆಸಾರ್ಟ್’ ಮೂಲಕ ಮತ್ತೊಂದು ಹೆಸರು ಬಂದಂತಾಗಿದೆ.

ಬೆಳೆಯುತ್ತಿರುವ ಮೂಡುಬಿದಿರೆಗೆ ಇಂತದ್ದೊಂದು ಹೈಫೈ ರೆಸಾರ್ಟ್ ನ ಅಗತ್ಯವಿತ್ತು.ಅದನ್ನು ಪ್ರವೀಣ್ ಶೆಟ್ಟಿ ಅವರು ಸ್ಥಾಪನೆ ಮಾಡುವ ಮೂಲಕ ಪ್ರವಾಸಿಗರ,ರೆಸಾರ್ಟ್ ಪ್ರಿಯರ ಮನಗೆದ್ದಿದ್ದಾರೆ. ಈ ರೆಸಾರ್ಟ್ ನಿಂದಾಗಿ ಸಂಪಿಗೆ ಪರಿಸರ ಕೂಡಾ ಡೆವಲಪ್ಮೆಂಟ್ ಆಗುವಂತಾಗಿದೆ.

ಅಂದಹಾಗೆ ರೆಸಾರ್ಟ್ ವೈಶಿಷ್ಟ್ಯಗಳೇನು ?:
ಎರಡು ಐಷಾರಾಮಿ ಸೂಟ್ ಗಳು,12 ಪೂಲ್ ವಿಲ್ಲಾಗಳು,12 ಪೂಲ್ ವ್ಯೂ ಕೊಠಡಿಗಳು,10 ಡಿಲಕ್ಸ್ ಕೊಠಡಿಗಳು.
ಹವಾ ನಿಯಂತ್ರಿತ ಕೊಠಡಿಗಳು,ಉಪಗ್ರಹ ಚಾನೆಲ್ ಗಳೊಂದಿಗೆ ಪ್ಲಾಟ್ ಸ್ಕ್ರೀನ್ ಟಿವಿ,ಮಿನಿ ಬಾರ್, ವೈಫೈ ವ್ಯವಸ್ಥೆ,ಐಷಾರಾಮಿ ಕೊಠಡಿಗಳಲ್ಲಿ ಸಿಟಿ ಪೂಲ್ ಮತ್ತು ಜಂಗಲ್ ವೀಕ್ಷಣೆ,260-240 ಚದರಡಿಯ ಡಬ್ಬಲ್ ರೂಮ್,ಕಿಂಗ್ ಸೈಝ್ ಹಾಸಿಗೆ,ಸ್ನಾನಗೃಹ,ಸ್ನಾನಗೃಹದಲ್ಲೊಂದು ಬಾತ್ ಟಬ್,ಮೂವರು ಅತಿಥಿಗಳಿಗೆ ಒಂದು ಹೆಚ್ಚುವರಿ ಹಾಸಿಗೆ ವ್ಯವಸ್ಥೆ.
ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ, ಅದರಲ್ಲಿ ಕಿಂಗ್ ಸೈಝ್ ಹಾಸಿಗೆ,ಮಾರ್ಬಲ್ ಹಾಸಿದ ಸ್ನಾನಗೃಹಗಳು,ವಿಶಾಲ ಲಾಂಜ್ ಪ್ರದೇಶ,ವಿಶ್ರಾಂತಿಗಾಗಿ ಸೊಗಸಾದ ಟೇಬಲ್ ಗಳು ಮತ್ತು ಆರಾಮದಾಯಕ ಕುರ್ಚಿಗಳು.




ಐಷಾರಾಮಿ ಜೀವನಾನುಭವದ ಪೂಲ್ ವಿಲ್ಲಾ,ದೈಹಿಕ ಮತ್ತು ಮಾನಸಿಕ ನೆಮ್ಮದಿಗಾಗಿ ತಜ್ಞರಿಂದ ಸ್ಪಾ ಮತ್ತು ವೆಲ್ ನೆಸ್,ದೇಶೀಯ ಮತ್ತು ಅಂತರಾಷ್ಟ್ರೀಯ ಊಟೋಪಚಾರದ ಕ್ವಾಲಿಟಿ ರೆಸ್ಟೋ ಬಾರ್,ಹಾರಿಝಾನ್ ರೂಫ್ ಟಾಪ್ ಬಾರ್,ಮಕ್ಕಳಿಗಾಗಿ ಕಿಟ್ಸ್ ಪ್ಲೇ ಏರಿಯಾ,ಪೋಲರೈಸ್ ಲಾಂಜ್ ಬಾರ್,ಲಾಂಡ್ರಿ ಮತ್ತು ಡ್ರೈಕ್ಲೀನಿಂಗ್, ಔತಣಕೂಟಗಳಿಗೆ ವಿಶಾಲ ಸಭಾಂಗಣ ಹಾಗೂ ಇನ್ನಿತರ ಅತ್ಯಾಧುನಿಕ ವ್ಯವಸ್ಥೆಗಳಿವೆ ಎಂದು ರೆಸಾರ್ಟ್ ಮಾಲಕ ಪ್ರವೀಣ್ ಶೆಟ್ಟಿ ಅವರು ತಿಳಿಸಿದ್ದಾರೆ.


