ಬಂಟ್ವಾಳ ತಾಲೂಕಿನ ಮನೆಯೊಂದರಲ್ಲಿ ಅಕ್ರಮ ಕಳ್ಳಬಟ್ಟಿ ತಯಾರಿಸುತ್ತಿದ್ದ ಮಾಹಿತಿ ಪಡೆದ ಬಂಟ್ವಾಳ ಅಬಕಾರಿ ಉಪನಿರೀಕ್ಷಕ ರಾಜಾ ನಾಯ್ಕ್ ನೇತ್ರತ್ವದ ತಂಡವು ದಾಳಿ ನಡೆಸಿ ಆರೋಪಿ ಸಹಿತ ಕಳ್ಳಬಟ್ಟಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕು ಪಂಜಿಕಲ್ಲು ಕಂಬಲ್ದಡ್ಡ ನಿವಾಸಿ ರುಕ್ಮಯ್ಯ ಪೂಜಾರಿ ಈ ಪ್ರಕರಣದ ಆರೋಪಿ.

ಕಳ್ಳಬಟ್ಟಿ ತಯಾರಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ರಾಜಾನಾಯ್ಕ್ ಮತ್ತು ಸಿಬ್ಬಂದಿಗಳು ಆರೋಪಿ ಮನೆಗೆ ದಾಳಿ ನಡೆಸಿ ಒಂದೂವರೆ ಲೀಟರ್ ಸಾರಾಯಿ ಹಾಗೂ 55 ಲೀ.ಬೆಲ್ಲದ ಕೊಳೆ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.