ಶಿರ್ತಾಡಿಯ ಕರಾವಳಿ ಫ್ರೆಂಡ್ಸ್ ಸರ್ಕಲ್ ನ 12 ನೇ ವರ್ಷದ ಯಕ್ಷಗಾನ ಬಯಲಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಇಂದು ಸಂಜೆ 7-30 ರಿಂದ ಶಿರ್ತಾಡಿ ಬಸ್ ನಿಲ್ದಾಣ ಬಳಿ ನಡೆಯಲಿದೆ ಎಂದು ಸಂಚಾಲಕರಾದ ಸಂದೀಪ್ ಸಾಲ್ಯಾನ್ ಅವರು ತಿಳಿಸಿದ್ದಾರೆ.

ಶಿರ್ತಾಡಿಯ ಪ್ರವೀಣ್ ಕುಮಾರ್ ಜೈನ್,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾರಾಯಣ ಪರವ ಮಾಂಟ್ರಾಡಿ ಹಾಗೂ ಯಕ್ಷ ನಾಟ್ಯ ಗುರು ಅಕ್ಷಯ್ ಭಟ್ ಶಿರ್ತಾಡಿ ಅವರಿಗೆ ಸನ್ಮಾನ ,ಬಳಿಕ ಸುಂಕದಕಟ್ಟೆ ಮೇಳದವರಿಂದ ಮಾಯದ ದೃಷ್ಟಿ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

ಕರಾವಳಿ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾದ ಗೋಪಾಲ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಸಮಾಜ ಸೇವಕರಾದ ಮೋಹನ್ ಪಚ್ಚನಾಡಿ,ಜಯಶ್ರೀ ಹೊಟೆಲ್ ಮಾಲಕ ಸುರೇಶ್ ಅಂಚನ್,ಶಿರ್ತಾಡಿ ಗ್ರಾಮಪಂ.ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್,ಎಂ.ಎಫ್.ಸಿ.ಮಾಂಟ್ರಾಡಿ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಹಾಗೂ ರಿಕ್ಷಾ ಮಾಲಕರಾದ ಸುಭಾಸ್ ಜೈನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂದೀಪ್ ಸಾಲ್ಯಾನ್ ತಿಳಿಸಿದ್ದಾರೆ.