11 ವರ್ಷಗಳಿಂದ ಪರಿಸರ ಸಹ್ಯ ವಸ್ತುಗಳನ್ನ ಬಳಸಿ ವಿಶಿಷ್ಟ ಸ್ವರೂಪದ ಕ್ರಿಸ್ಮಸ್ ನಕ್ಷತ್ರಗಳನ್ನು ತಯಾರಿಸುತ್ತಾ ಬಂದಿರುವ ಶಿರ್ತಾಡಿಯ ಲೈಫ್ ಸೇವಾ ಸಂಸ್ಥೆ ಈ ಬಾರಿ ಅಡಿಕೆ ಹಾಳ ಅಡಿಕೆ ಸೋಗೆ ಹಾಗೂ ಹಾಳೆಯ ಸೀರೆ ಬಳಸಿ ಬೃಹತ್ ನಕ್ಷತ್ರವನ್ನು ನಿರ್ಮಿಸಿದೆ.
ಈ ನಕ್ಷತ್ರವನ್ನು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ಎದುರಿನಲ್ಲಿ ಬೃಹತ್ ಕಂಬಕ್ಕೆ ತೂಗುಹಾಕಲಾಗಿದ್ದು ಡಿಸೆಂಬರ್ 24 ರಿಂದ ಜನವರಿ 8ರವರೆಗೆ ಪ್ರದರ್ಶನಕ್ಕೆ ಇಡಲಾಗುತ್ತದೆ.
ಪರಿಸರ ಪ್ರೀತಿ, ಶಾಂತಿಯೊಂದಿಗೆ ಧಾರ್ಮಿಕ ಭಾವೈಕ್ಯ ಸಾರುವ ಕಾರ್ಯದಲ್ಲಿ ಈ ಹಿಂದಿನಂತೆ ಕೈ ಜೋಡಿಸಿರುವ ಲೈಫ್ ಸೇವಾ ಸಂಸ್ಥೆಯ ಸದಸ್ಯರಾದ ಪ್ರಸನ್ನ ಸಿಕ್ಕೇರಾ ಸಿಪ್ರಿಯನ್ ಡಿಸೋಜಾ, ಪ್ರೆಸ್ಟನ್ ದಾಂತೀಸ್, ಪೀಟರ್ ದಾಂತೀಸ್, ನವೀನ್ ಶೆಟ್ಟಿ ಪೂರಕವಾಗಿ ಸಹಕರಿಸಿದ್ದಾರೆ.

ಈ ನಕ್ಷತ್ರವು 30 ಅಡಿಕೆ ಹಾಳ 40 ಅಡಿಕೆ ಸೋಗೆ 4 ಹಳೆಯ ಸೀರೆ ಬಳಸಿ ತಯಾರಿಸಲಾಗಿದ್ದು 12 ಅಡಿ ಎತ್ತರ 11 ಅಡಿ ಅಗಲ ಹೊಂದಿದೆ. ನಕ್ಷತ್ರದ ಮಧ್ಯ ಭಾಗದಲ್ಲಿ ಆಕರ್ಷಕವಾದ ಬೈಹುಲ್ಲಿನ ಮೇಲ್ಮಾವಣಿಯನ್ನು ಹೊಂದಿರುವ ಮರದಿಂದ ತಯಾರಿಸಿದ ಗೋದಲಿಯು ಏಸುಕ್ರಿಸ್ತನ ಹುಟ್ಟನ್ನು ಸುಂದರವಾಗಿ ಬಿಂಬಿಸಿದ ಒಟ್ಟು 8 ದಿನಗಳ ಪರಿಶ್ರಮ ಈ ನಕ್ಷತ್ರ ಹಿಂದಿದೆ. ವಿಶಿಷ್ಟ ಬಣ್ಣದ ಬೆಳೆಕಿನ ಸಂಯೋಜನೆ ಈ ನಕ್ಷತ್ರದ ಆಕರ್ಷಣೆಯನ್ನು ಹೆಚ್ಚಿಸಲಿದೆ