ತನಗೆ ಸಿಕ್ಕ ಗೌರವಧನವನ್ನು ವಿದ್ಯಾರ್ಥಿಗಳಿಬ್ಬರಿಗೆ ಹಂಚಿ ನೀಡುವ ಮೂಲಕ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಮಾದರಿಯಾಗಿದ್ದಾರೆ.
ಪಿಯುಸಿ ವಿದ್ಯಾರ್ಥಿ ಕೌಶಿಕ್ ಪೂಜಾರಿ ಹಾಗೂ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ಐದನೇ ತರಗತಿ ವಿದ್ಯಾರ್ಥಿ ಶ್ಲೋಕ ಶೆಟ್ಟಿ ಅವರಿಗೆ ತನ್ನ ಗೌರವ ಧನವನ್ನು ಹಂಚಿ ನೀಡಿದ್ದಾರೆ.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಳಿಕ ಸದಾ ಜನಸೇವೆಯಲ್ಲಿರುವ ಅರುಣ್ ಶೆಟ್ಟಿ ಮೂಡುಬಿದಿರೆಗೆ ಸರಕಾರಿ ಬಸ್ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಇದೀಗ ತನಗೆ ಸಿಕ್ಕ ಗೌರವಧನವನ್ನು ಬಡವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮತ್ತೊಮ್ಮೆ ಗಮನಸೆಳೆದಿದ್ದಾರೆ.
