ಪುಚ್ಚಮೊಗರು ಸಮೀಪದ ಪಡಕೋಡಿಬೆಟ್ಟುವಿನ ‘ನಮ್ಮ ಜವನೆರ್’ ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಹಾಗೂ ಗ್ಯಾರಂಟಿ ಯೋಜನಾ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಅವರು ನಮ್ಮ ಜವನೆರ್ ತಂಡದ ಸಾಮಾಜಿಕ ಸೇವೆಯ ಬಗ್ಗೆ ಮಾತನಾಡಿ ಅವರಿಗೆ ಯಶಸ್ಸನ್ನು ಹಾರೈಸಿದರು.
ಚಂದ್ರಹಾಸ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಮಾರಪ್ಪ ಪೂಜಾರಿ,ಉಮೇಶ್ ಪೂಜಾರಿ, ಮೈಕಲ್ ನೊರೊನ್ಹ,ಶೀನ,ಲಿಂಗಪ್ಪ ಪೂಜಾರಿ, ಜಯರಾಜ್ ಬಲ್ಲಾಳ್,ಅಜಿತ್ ಜೈನ್ ಹಾಗೂ ಸಂತೋಷ್ ಶೆಟ್ಟಿ ಮಿಜಾರ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಘದ ಪದಾಧಿಕಾರಿಗಳಾದ ರಶ್ಮಿತ್ ಶೆಟ್ಟಿ, ಸುದೀಪ್ ಪೂಜಾರಿ,ಶಿವಪ್ರಸಾದ್ ಪೂಜಾರಿ,ಸಂದೇಶ ಪೂಜಾರಿ,ರಾಕೇಶ್ ದೇವಾಡಿಗ,ಸುರಾಜ್ ದೇವಾಡಿಗ,ತುಷಾರ್ ಪೂಜಾರಿ,ಜಗದೀಶ್ ಪೂಜಾರಿ, ರಕ್ಷಿತ್ ಶೆಟ್ಟಿ,ಜಯರಾಮ್ ದೇವಾಡಿಗ,ರೋಹಿತ್ ದೇವಾಡಿಗ,ಸಚಿನ್ ಆಚಾರ್ಯ, ಶಶಿಕಾಂತ್ ಆಚಾರ್ಯ,ಸಚಿನ್ ನಾಯ್ಕ,ಪ್ರಸಾದ್ ದೇವಾಡಿಗ,ಶಿವಾನಂದ ನಾಯ್ಕ,ಪೃಥ್ವಿರಾಜ್ ಶೆಟ್ಟಿ,ಶಿಶಿರ್ ಪೂಜಾರಿ,ಮೆಕ್ವಿನ್ ನೊರೊನ್ಹ,ಧೀರಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಯಶೋಧರ ಪೂಜಾರಿ ಸಿದ್ದಕಟ್ಟೆ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ,ವಂದಿಸಿದರು.
ಸ್ಥಳೀಯ ವಿದ್ಯಾರ್ಥಿಗಳು, ಯುವಕ ಯುವತಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೈಲೂರು ತಂಡದವರಿಂದ ‘ಅಷ್ಟೆಮಿ’ ತುಳು ನಾಟಕ ಪ್ರದರ್ಶನಗೊಂಡಿತು.