Latest News

ಕೆಎಸ್ಸಾರ್ಟಿಸಿ ಬಸ್ ನಿಲುಗಡೆ ಸ್ಥಳ ನಿಗದಿಪಡಿಸಲು ಮನವಿ

Picture of Namma Bedra

Namma Bedra

Bureau Report

ಮಂಗಳೂರು-ಮೂಡುಬಿದಿರೆ- ಕಾರ್ಕಳ ರಸ್ತೆಗೆ ಕೆಎಸ್ಸಾರ್ಟಿಸಿ ಬಸ್ ಆರಂಭಗೊಂಡಿರುವುದರಿಂದ ಮೂಡುಬಿದಿರೆ ತಾಲೂಕಿನ ಜನರಿಗೆ,ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ತುಂಬಾ ಅನುಕೂಲವಾಗಿದೆ,ಮೂಡುಬಿದಿರೆಯಲ್ಲಿ ಎರಡು ಕಡೆ ಬಸ್ ನಿಲುಗಡೆಗೆ ಸ್ಥಳ ನಿಗದಿಪಡಿಸಬೇಕೆಂದು ಆಗ್ರಹಿಸಿ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ನೇತೃತ್ವದ ನಿಯೋಗವು ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅವರಿಗೆ ಮನವಿ ನೀಡಿದೆ.
ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುವ ಬಸ್ಸುಗಳು ಮೂಡುಬಿದಿರೆಯ ರಾಜೀವಗಾಂಧಿ ವಾಣಿಜ್ಯ ಸಂಕೀರ್ಣ ಎದುರು ಹಾಗೂ ಕಾರ್ಕಳದಿಂದ ಮಂಗಳೂರು ಹೋಗುವ ಸರಕಾರಿ ಬಸ್ ಗಳು ಪಂಚರತ್ನ ಹೊಟೇಲ್ ವಿರುದ್ಧ ದಿಕ್ಕಿನಲ್ಲಿರುವ ಜಾಗದಲ್ಲಿ ನಿಲುಗಡೆಗೊಳಿಸುವಂತೆ ಸ್ಥಳ ನಿಗದಿಪಡಿಸಬೇಕೆಂದು ಆಗ್ರಹಿಸಿದೆ.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯರಾದ ಪುರುಷೋತ್ತಮ ನಾಯಕ್ ಪುತ್ತಿಗೆ,ರಜನಿ ಪಡುಮಾರ್ನಾಡು, ಪ್ರಭಾಕರ್ ದರೆಗುಡ್ಡೆ,ಮೂಡಾ ಸದಸ್ಯ ಪ್ರಕಾಶ್ ಒಂಟಿಕಟ್ಟೆ,ಗಣೇಶ್ ಶೆಟ್ಟಿ ಪಾಲಡ್ಕ,ಸಂತೋಷ್ ಶೆಟ್ಟಿ ಮಿಜಾರ್ ಈ ಸಂದರ್ಭದಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು