Latest News

ಡಿ.ಎ.ಉಸ್ಮಾನ್ ಅವರಿಗೆ ‘ ಕರುನಾಡ ಸಮಾಜ ರತ್ನ’ ಪ್ರಶಸ್ತಿ

Picture of Namma Bedra

Namma Bedra

Bureau Report

ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ದ.ಕ.ಸಮಿತಿ,ನೂರೇ ಅಜ್ಮೀರ್ ಮಜ್ಲಿಸ್ ಲೀಡರ್ಸ್ ಬಳಗ,ಕರ್ನಾಟಕ ಮಾದಕತೆ ಮಾರಣಾಂತಿಕ ಅಧ್ಯಯನಾತ್ಮಕ ಪುಸ್ತಕ ಸಮಿತಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ‘ ಕರುನಾಡ ಸಮಾಜ ರತ್ನ’ ಪ್ರಶಸ್ತಿಗೆ ಡಿ.ಎ.ಉಸ್ಮಾನ್ ಹಾಜಿ ಏರ್ ಇಂಡಿಯಾ, ತೋಡಾರ್ ಅವರು ಭಾಜನರಾಗಿದ್ದಾರೆ.
ಉಸ್ಮಾನ್ ಹಾಜಿ ಅವರ ಉದ್ಯಮ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಹಲವು ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಉಸ್ಮಾನ್ ಅವರು ಇತ್ತೀಚೆಗೆ ಕಾಶಿಪಟ್ಣದಲ್ಲಿ ನಡೆದ ದಾರುನ್ನೂರ್ ವಿದ್ಯಾಸಂಸ್ಥೆಯ ದಶಸಂಭ್ರಮ ಕಾರ್ಯಕ್ರಮದ ಯಶಸ್ಸಿಗೆ ನಿರಂತರವಾಗಿ ಶ್ರಮಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು