ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧೀನದಲ್ಲಿರುವ ಇಹ್ಯಾವುಲ್ ಇಸ್ಲಾಂ ಸ್ವಲಾತ್ ಕಮಿಟಿಯ 27 ನೇ ಸ್ವಲಾತ್ ವಾರ್ಷಿಕ ಪ್ರಯುಕ್ತ ಇಂದಿನಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಇಂದು ರಾತ್ರಿ ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾ ನೆರವೇರಿಸಲಿದ್ದು ಅನ್ವರ್ ಅಲ್ ಹುದವಿ ಅವರ ನೇತೃತ್ವದಲ್ಲಿ ‘ಇಶ್ಕ್ ಮಜ್ಲಿಸ್’ ಕಾರ್ಯಕ್ರಮ ನಡೆಯಲಿದೆ.
ಶನಿವಾರ ರಾತ್ರಿ ಅಕ್ರಮ್ ಅಲಿ ತಂಙಳ್ ಅಂಗರಕರಿಯ ಅವರ ದುವಾ ನೇತೃತ್ವದಲ್ಲಿ ಇಬ್ರಾಹಿಂ ಖಲೀಲ್ ಹುದವಿ ಅವರು ಮುಖ್ಯ ಪ್ರಭಾಷಣ ನೀಡಲಿದ್ದಾರೆ.

ಭಾನುವಾರ ಸ್ವಲಾತ್ ವಾರ್ಷಿಕ ಪ್ರಯುಕ್ತ ಸ್ವಲಾತ್ ವಾರ್ಷಿಕ ನಡೆಯಲಿದ್ದು ಸಯ್ಯಿದ್ ಕೆ.ಪಿ.ಎಂ.ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅವರ ನೇತೃತ್ವದಲ್ಲಿ ‘ಸ್ವಲಾತ್ ಮಜ್ಲಿಸ್’ ನಡೆಯಲಿದೆ ಎಂದು ಆಡಳಿತ ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ.,ಕಾರ್ಯದರ್ಶಿ ಝಕರಿಯಾ ಯೂಸುಫ್, ಸ್ವಲಾತ್ ಕಮಿಟಿಯ ಅಧ್ಯಕ್ಷ ಅಶ್ರಫ್ ಕಜೆ,ಕಾರ್ಯದರ್ಶಿ ಶಮೀರ್ ಅವರು ತಿಳಿಸಿದ್ದಾರೆ.